ETV Bharat / state

ಗುಂಡ್ಲುಪೇಟೆಯಲ್ಲಿ ನರಭಕ್ಷಕ ಹುಲಿ ದಾಳಿಗೆ ಮತ್ತೊಬ್ಬ ಬಲಿ! - ನರಭಕ್ಷಕ ಹುಲಿ ದಾಳಿ

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿಯ ನಿವಾಸಿ ಶಿವಲಿಂಗಪ್ಪ ಎಂಬುವವರನ್ನು ಹುಲಿ ಕೊಂದು ಹಾಕಿದೆ. ಇದು ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಲೇ ಆಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಲಿ ದಾಳಿಯಿಂದ ಮೃತಪಟ್ಟ ನಿವಾಸಿ ಶಿವಲಿಂಗಪ್ಪ
author img

By

Published : Oct 8, 2019, 3:43 PM IST

ಚಾಮರಾಜನಗರ: ನರಭಕ್ಷಕ ಹುಲಿ ದಾಳಿಗೆ ಮತ್ತೋರ್ವ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ಮಕ್ಕಳ ಮಲ್ಲಪ್ಪ ದೇವಾಲಯದ ಬಳಿ ನಡೆದಿದೆ.

Death by tiger attack
ಹುಲಿ ದಾಳಿಯಿಂದ ಮೃತಪಟ್ಟ ಶಿವಲಿಂಗಪ್ಪ

ಇಲ್ಲಿನ ಚೌಡಹಳ್ಳಿ ಗ್ರಾಮದ ಶಿವಲಿಂಗಪ್ಪ(55) ಹುಲಿ ದಾಳಿಗೆ ಬಲಿಯಾದವರು. ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ವೇಳೆ ಏಕಾಏಕಿ ಮೇಲೆ ಎರಗಿದ ಹುಲಿ ಕತ್ತಿಗೆ ಬಾಯಿ ಹಾಕಿದೆ. ಪಕ್ಕದ ಜಮೀನಿನಲ್ಲಿದ್ದ ಗ್ರಾಮಸ್ಥರು ಹುಡುಕಾಟ ಪ್ರಾರಂಭಿಸಿದಾಗ ಪೊದೆ ಬಳಿ ಕೊಂದು ಹುಲಿ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.

ಅರಣ್ಯ ಇಲಾಖೆ ವಿರುದ್ಧ ಆಕ್ರೋಶ: ಸ್ಥಳದಲ್ಲಿ ಅರಣ್ಯ ಇಲಾಖೆ ವಿರುದ್ಧ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಳೆದ ಸೆ. 1ರಂದು ಚೌಡಹಳ್ಳಿ ಗ್ರಾಮದವರೇ ಆದ ಶಿವಮಾದಯ್ಯ ಎಂಬುವವರನ್ನು ಹುಲಿ ಕೊಂದು ತಿಂದಿತ್ತು. ಬಳಿಕ, ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿದರಾದರೂ ಹುಲಿ ಕಾಣಿಸಿಲ್ಲ ಎಂದು ಹೇಳಲಾಗಿತ್ತು.

ಘಟನೆ ಮಾಸುವ ಮುನ್ನವೇ ಮತ್ತೊಂದು ದಾಳಿಯಾಗಿದ್ದು, ಚೌಡಹಳ್ಳಿ, ಹುಂಡಿಪುರ, ಕೆಬ್ಬೇಪುರ ಗ್ರಾಮಗಳಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

Intro:ನರಭಕ್ಷಕನ ದಾಳಿಗೆ ಮತ್ತೊಂದು ಬಲಿ: ದನಗಾಹಿಯನ್ನು ಕೊಂದ ಹುಲಿ!

ಚಾಮರಾಜನಗರ: ನರಭಕ್ಷಕನ ದಾಳಿಗೆ ಮತ್ತೋರ್ವ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ಮಕ್ಕಳ ಮಲ್ಲಪ್ಪ ದೇವಾಲಯದ ಬಳಿ ನಡೆದಿದೆ.

Body:ಚೌಡಹಳ್ಳಿ ಗ್ರಾಮದ ಶಿವಲಿಂಗಪ್ಪ(55) ಮೃತ ದುರ್ದೈವಿ. ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ವೇಳೆ ಏಕಾಏಕಿ ಬಂದೆರಗಿದ ಹುಲಿ ಕತ್ತನ್ನು ಹಿಡಿದು ಎಳೆದೊಯ್ಯುವಾಗ ಪಕ್ಕದ ಜಮೀನಿನಲ್ಲಿದ್ದವರು ಕಂಡು ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ.ಪೊದೆ ಬಳಿ ಕೊಂದು ಹುಲಿ ಪರಾರಿಯಾಗಿದೆ ಎಂದು ತಿಳಿದುಬಂದಿದೆ

ಅರಣ್ಯ ಇಲಾಖೆ ವಿರುದ್ಧ ಆಕ್ರೋಶ:
ಸ್ಥಳದಲ್ಲಿ ಅರಣ್ಯ ಇಲಾಖೆ ವಿರುದ್ಧ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಳೆದ ಸೆ.೧ ರಂದು ಚೌಡಹಳ್ಳಿ ಗ್ರಾಮದವರೇ ಆದ ಶಿವಮಾದಯ್ಯ ಎಂಬವರನ್ನು ಹುಲಿ ಕೊಂದು ತಿಂದಿತ್ತು. ಬಳಿಕ, ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿದರಾದರೂ ಹುಲಿ ಕಾಣಿಸಿಲ್ಲ ಎಂದು ಹೇಳಿದ್ದರು.

Conclusion:ಘಟನೆ ಮಾಸುವ ಮುನ್ನವೇ ಮತ್ತೊಂದು ದಾಳಿಯಾಗಿದ್ದು ಚೌಡಹಳ್ಳಿ, ಹುಂಡಿಪುರ, ಕೆಬ್ಬೇಪುರ ಗ್ರಾಮಗಳಲ್ಲಿ ಆತಂಕ ಸ್ಥಿತಿ ನಿರ್ಮಾಣವಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.