ಚಾಮರಾಜನಗರ: ಕಾಂಗ್ರೆಸ್ನವರು ರಾವಣರು ಎಂಬ ಕಟೀಲ್ ಹೇಳಿಕೆ ಕುರಿತು ರಾಜ್ಯಾಧ್ಯಕ್ಷರ ಮಾತನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಸಚಿವ ಸಿ.ಟಿ. ರವಿ ಹೇಳಿಕೆಯನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ.
ಜಿಲ್ಲಾ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಡಿಕೆಶಿ ಬಂಧನಕ್ಕೆ ಸಿದ್ದರಾಮಯ್ಯ ಕಾರಣ ಎಂದು ಡಿಕೆಶಿ ತಾಯಿ ಗೌರಮ್ಮ ಐಟಿ ರೇಡ್ ಆದ ಸಂದರ್ಭ ಕೊಟ್ಟ ಹೇಳಿಕೆ ಸುಳ್ಳಾಗಿದ್ದರೇ ಕಟೀಲ್ ಹೇಳಿಕೆಯೂ ತಪ್ಪು, ಅವರ ಹೇಳಿಕೆ ಸರಿಯಿದ್ದರೇ ಕಟೀಲ್ ಹೇಳಿಕೆಯೂ ಸರಿ ಎಂದು ಇಬ್ಬರ ಹೇಳಿಕೆಗೂ ತಳುಕು ಹಾಕಿದರು.
ದೇಶದ ಜನ ಭ್ರಷ್ಟಾಚಾರದ ವಿರುದ್ಧ ವಿದ್ದರೇ ಭ್ರಷ್ಟಾಚಾರವನ್ನು, ಸ್ವಜನ ಪಕ್ಷಪಾತವನ್ನು ಕಾಂಗ್ರೆಸ್ ಪಕ್ಷ ಪೋಷಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಪ್ರಾಮಾಣಿಕರ ಮನೆಯಲ್ಲಿ ಎಂಟೂವರೆ ಕೋಟಿ ಹಣ ಸಿಗುತ್ತಾ, ಡಿಕೆಶಿ ನಿಜವಾಗಿ ಪ್ರಾಮಾಣಿಕವಾಗಿದ್ದರೆ, ಎಂಟೂವರೆ ಕೋಟಿ ಹಣಕ್ಕೆ ಲೆಕ್ಕ ಕೊಡಲಿ ಎಂದು ಇದೇ ವೇಳೆ ಸವಾಲೆಸೆದರು.
ಯಡಿಯೂರಪ್ಪ ಒಲ್ಲದ ಶಿಶು ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿ, ಯಡಿಯೂರಪ್ಪ ಮೇಲೆ ಪ್ರೀತಿನೋ-ಭೀತಿನೋ, ಪ್ರೀತಿ ಇರಲಂತೂ ಸಾಧ್ಯವಿಲ್ಲ ಎಂದರು.