ಚಾಮರಾಜನಗರ : ಮಸಾಗಪುರ ಮತ್ತು ಕೆಲ್ಲಂಬಳ್ಳಿ ಚರ್ಚ್‌ನಲ್ಲಿ ಕೆಎಸ್‌ಡಿ ಬಿಷಪ್ ಮೋಹನ್ ಮನೋರಾಜ್ ಹಾಗೂ ತ್ಯಾಗರಾಜ್ ಅವರು ದಾಖಲಾತಿ ತಿರುಚಿ ಸರ್ಕಾರ ಹಾಗೂ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಮೈಸೂರು ವಿಭಾಗದ ಸಿಎಸ್‌ಐ ಟಿಎ ಫಲಾನುಭವಿಗಳ ಕಾರ್ಯದರ್ಶಿ ಸುಂದರ್ ಪ್ರೇಮ್‌ಕುಮಾರ್ ಆರೋಪಿಸಿದ್ದಾರೆ.
ಮೈಸೂರು ವಿಭಾಗದ ಸಿಎಸ್‌ಐ ಟಿಎ ಫಲಾನುಭವಿಗಳ ಕಾರ್ಯದರ್ಶಿ ಸುಂದರ್ ಪ್ರೇಮ್‌ಕುಮಾರ್ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋಹನ್ ಮನೋರಾಜ್ ಅವರು 2015ರಲ್ಲಿ ಬಿಷಪ್ ಆಗಿ ಅಧಿಕಾರ ವಹಿಸಿಕೊಂಡ ನಂತರ ತಮಗಿಷ್ಟ ಬಂದಂತೆ ಅಧಿಕಾರ ನಡೆಸುತ್ತಿದ್ದಾರೆ. ತ್ಯಾಗರಾಜು ಅವರು ಕೆಲ್ಲಂಬಳ್ಳಿ ದೇವಾಲಯವನ್ನು ಅಭಿವೃದ್ಧಿ ಪಡಿಸುತ್ತೇವೆಂದು ಜನರನ್ನು ನಂಬಿಸಿ, ಅವರಿಂದ ಚಂದಾ ಸಹ ಎತ್ತಿ ಸಮುದಾಯ ಭವನವನ್ನು ಕಟ್ಟಿಸುತ್ತಿದ್ದಾರೆ. ಅಸೆಸ್‌ಮೆಂಟ್ ಪ್ರತಿಯಲ್ಲಿ ದೇವಾಲಯವನ್ನು ಸಮುದಾಯ ಭವನ ಎಂದು ತಿದ್ದುಪಡಿ ಮಾಡಿಸುವ ಮೂಲಕ ಸರ್ಕಾರಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ದೂರಿದರು.ಚರ್ಚ್‌ನ ಪಾದ್ರಿಗಳು ದಾಖಲಾತಿ ತಿರುಚಿ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ: ಸುಂದರ್ ಪ್ರೇಮ್‌ಕುಮಾರ್ ಆರೋಪ ಸಿಎಸ್‌ಐ ಚರ್ಚ್‌ನ ಸಭಾಪಾಲಕರಾಗಿದ್ದ ಉಷಾ ಕ್ಲೆಮೇಸ್ಸಿಯಾ ಅವರು, ಮಸಗಾಪುರದಲ್ಲಿದ್ದ ತ್ಯಾಗರಾಜು ಅವರನ್ನು ಚಾಮರಾಜನಗರಕ್ಕೆ ವರ್ಗಾವಣೆ ಮಾಡಿದ್ದು, ಇವರಿಬ್ಬರೂ ಚುನಾಯಿತ ಸಮಿತಿಗೆ ಲೆಕ್ಕ ನೀಡಿಲ್ಲ. ವರ್ಗಾವಣೆಯಾದಾಗ ಲೆಕ್ಕಪತ್ರ ನೀಡಿಲ್ಲ. ಬಿಷಪ್ ಮೋಹನ್ ಮನೋರಾಜ್ ಅವರಿಗೆ ದೂರು ನೀಡಿದ್ದರಿಂದ ಚಾಮರಾಜನಗರ ಸಿಎಸ್‌ಐ ದೇವಾಲಯದ ಚುನಾಯಿತ ಸದಸ್ಯರನ್ನು ಅಮಾನತು ಮಾಡುವ ನಿಯಮ ಉಲ್ಲಂಸಿದ್ದಾರೆ ಎಂದು ಆರೋಪಿಸಿದರು. ಓದಿ: ಗಣಿನಾಡಿನಲ್ಲಿ ವರ್ಷಕ್ಕೆ ಬರೋಬ್ಬರಿ 350 ಮಂದಿ ರಸ್ತೆ ಅಪಘಾತಕ್ಕೆ ಬಲಿ!!
ಬಿಷಪ್ ಅವರು ಏಕಾಏಕಿಯಾಗಿ ತಮ್ಮ ಅನುಕೂಲಕ್ಕಾಗಿ ತ್ಯಾಗರಾಜು ಅವರನ್ನು ಮಸಗಾಪುರದಿಂದ ಚಾಮರಾಜನಗರಕ್ಕೆ ಹಾಗೂ ಅವರ ಪತ್ನಿ ಉಷಾ ಅವರನ್ನು ಚಾಮರಾಜನಗರದಿಂದ ಮಸಗಾಪುರಕ್ಕೆ ವರ್ಗಾವಣೆ ಮಾಡಿದ್ದಾರೆ. ಇವರಿಬ್ಬರ ದುರಾಳಿತದ ಬಗ್ಗೆ ಬಿಷಪ್‌ರಿಗೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಆ ಬಳಿಕ ತಹಸೀಲ್ದಾರ್ ಬಳಿ ಹೋಗಿ ಚಾಮರಾಜನಗರ ಹಾಗೂ ಮಸಗಾಪುರದಲ್ಲಿರುವ ಸಿಎಸ್‌ಐ ದೇವಾಲಯಗಳನ್ನು ಮುಚ್ಚಿಸಿದ್ದಾರೆ. ಈ ಸಂಬಂಧ ಸಮಗ್ರ ತನಿಖೆ ಮಾಡುವ ಮೂಲಕ ಬಿಷಪ್ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಆ ಮೂಲಕ ನೊಂದ ಕ್ರೈಸ್ತರಿಗೆ ನ್ಯಾಯ ಸಿಗಬೇಕು. ನ್ಯಾಯ ಸಿಗುವ ತನಕ ಹೋರಾಟ ಮಾಡಲಾಗುವುದು ಎಂದರು.