ETV Bharat / state

ಬಂಡೀಪುರಕ್ಕೆ ಹೊಂದಿಕೊಂಡ ಮಧುಮಲೈನಲ್ಲಿ 28 ಆನೆಗಳಿಗೆ ಕೊರೊನಾ ಪರೀಕ್ಷೆ - Corona test for elephants

ವಾರದ ಹಿಂದಷ್ಟೇ ತಮಿಳುನಾಡಿನ ಮಧುಮಲೈ‌ ಆನೆ ಕ್ಯಾಂಪಿನ ಇಬ್ಬರು ಸಿಬ್ಬಂದಿಗೆ ಕೋವಿಡ್ ದೃಢವಾದ ಹಿನ್ನೆಲೆಯಲ್ಲಿ 2 ಮರಿಯಾನೆ ಸೇರಿದಂತೆ 28 ಆನೆಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ.

Corona test for elephants
ಆನೆಗಳಿಗೆ ಕೊರೊನಾ ಪರೀಕ್ಷೆ
author img

By

Published : Jun 9, 2021, 11:14 AM IST

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತಿರುವ‌ ತಮಿಳುನಾಡಿನ ಮಧುಮಲೈ‌ ಹುಲಿ ಸಂರಕ್ಷಿತ ಪ್ರದೇಶದ‌ಲ್ಲಿ ಆನೆಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ.

ಆನೆಗಳಿಗೆ ಕೊರೊನಾ ಪರೀಕ್ಷೆ

ಈ ಕುರಿತು ಈಟಿವಿ ಭಾರತಕ್ಕೆ ಮಧುಮಲೈ ವಲಯ ಅರಣ್ಯಾಧಿಕಾರಿ ದಯಾನಂದನ್ ಮಾಹಿತಿ ನೀಡಿ, ಒಂದು ವಾರದ ಹಿಂದಷ್ಟೇ ಆನೆ ಕ್ಯಾಂಪಿನ ಇಬ್ಬರು ಸಿಬ್ಬಂದಿಗೆ ಕೋವಿಡ್ ದೃಢವಾಗಿದ್ದು 2 ಮರಿಯಾನೆ ಸೇರಿದಂತೆ 28 ಆನೆಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ.

ವೈದ್ಯಾಧಿಕಾರಿ ರಾಜೇಶ್ ಆನೆಗಳನ್ನು ಮಲಗಿಸಿ ಸೊಂಡಿಲಿನಿಂದ ದ್ರವವನ್ನು ತೆಗೆದುಕೊಂಡಿದ್ದು, ಉತ್ತರ ಪ್ರದೇಶದ ಲ್ಯಾಬ್​ಗೆ ಗಂಟಲು ದ್ರವ ಮಾದರಿಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಚೆನ್ನೈ ಜೈವಿಕ ಉದ್ಯಾನವನದಲ್ಲಿ ಈ ಹಿಂದೆ ಸಿಂಹಗಳಿಗೆ ಕೋವಿಡ್ ಪಾಸಿಟಿವ್ ಆಗಿತ್ತು.

ಇದನ್ನೂ ಓದಿ: ಎಲ್ಲಿಗೀ ಪಯಣ? ಗಜಪಡೆಯ 500 ಕಿ.ಮೀ ಮಹಾ ಪಲಾಯನದ ಮೇಲೆ 410 ಜನರ ಕಣ್ಣು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.