ಚಾಮರಾಜನಗರ: ಕೊರೊನಾ ಶಂಕಿತ 29 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಈಗ ಆಕೆಯ ಕೊರಾನ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಕೆಯ ಸಾವಿಗೂ, ಕೊರೊನಾಗೂ ಯಾವುದೇ ಸಂಬಂಧವಿಲ್ಲ. ಗಂಟಲ್ ದ್ರವ ಪರೀಕ್ಷೆ ವರದಿ ನೆಗೆಟಿವ್ ಬಂದಿದ್ದು, ಯಾವುದೇ ಗೊಂದಲ ಮತ್ತು ಆತಂಕ ಬೇಡವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತಳು ಚಾಮರಾಜನಗರದ ಬ್ಯಾಡಮೂಡ್ಲು ಗ್ರಾಮದವರಾಗಿದ್ದು, ಮಂಡ್ಯದಿಂದ ನಾಲ್ಕು ದಿನದ ಹಿಂದೆ ತವರಿಗೆ ಬಂದಿದ್ದರು ಎಂದು ಹೇಳಿದರು.