ETV Bharat / state

ಗುತ್ತಿಗೆದಾರ ಮಾಡಿದ ಎಡವಟ್ಟು... ಸಂಸದ ಶ್ರೀನಿವಾಸಪ್ರಸಾದ್ ಈಗ ವಿಧಾನಸಭಾ ಸದಸ್ಯ! - ವಿ.ಶ್ರೀನಿವಾಸಪ್ರಸಾದ್

ಬಿಳಿಗಿರಿರಂಗನ ಬೆಟ್ಟದಲ್ಲಿರುವ ಸಮುದಾಯ ಭವನವನ್ನು ಸಂಸದ ವಿ‌.ಶ್ರೀನಿವಾಸಪ್ರಸಾದ್ ಅನುದಾನದಲ್ಲಿ ನವೀಕರಣಗೊಂಡಿದ್ದು ಪ್ರಸಾದ್ ಅವರನ್ನು ವಿಧಾನಸಭಾ ಸದಸ್ಯರು ಎಂದು ದಪ್ಪ ಅಕ್ಷರಗಳಲ್ಲಿ ಬರೆಸಿ ನಿರ್ಲಕ್ಷ್ಯ ತೋರಿದ್ದಾರೆ. ಇದು ಸಂಸದರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಶ್ರೀನಿವಾಸಪ್ರಸಾದ್​
ಶ್ರೀನಿವಾಸಪ್ರಸಾದ್​
author img

By

Published : Mar 19, 2021, 4:56 AM IST

ಚಾಮರಾಜನಗರ: ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಬಳಿಕ ಬಿಜೆಪಿ ಸೇರಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ವಿ.ಶ್ರೀನಿವಾಸಪ್ರಸಾದ್ ಈಗ ಮತ್ತೇ
ವಿಧಾನಸಭಾ ಸದಸ್ಯರಾಗಿದ್ದಾರೆ!! . ಆದರೆ ಇದು ನೈಜವಾಗಲ್ಲ , ಗುತ್ತಿಗೆದಾರರು ಮಾಡಿರುವ ಎಡವಟ್ಟಿನಿಂದ.

ಹೌದು..., ಬಿಳಿಗಿರಿರಂಗನ ಬೆಟ್ಟದಲ್ಲಿರುವ ಸಮುದಾಯ ಭವನವನ್ನು ಸಂಸದ ವಿ‌.ಶ್ರೀನಿವಾಸಪ್ರಸಾದ್ ಅನುದಾನದಲ್ಲಿ ನವೀಕರಣಗೊಂಡಿದ್ದು ಪ್ರಸಾದ್ ಅವರನ್ನು ವಿಧಾನಸಭಾ ಸದಸ್ಯರು ಎಂದು ದಪ್ಪ ಅಕ್ಷರಗಳಲ್ಲಿ ಬರೆಸಿ ನಿರ್ಲಕ್ಷ್ಯ ತೋರಿದ್ದಾರೆ. ಇದು ಸಂಸದರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ರಾಜ್ಯ ಸಚಿವರಾಗಿದ್ದಾಗ ಬಿಳಿಗಿರಿರಂಗನ ಬೆಟ್ಟದಲ್ಲಿ ಸಮುದಾಯ ಭವನದ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ, ಉದ್ಘಾಟನೆಯೂ ಆಗಿತ್ತು. ಆದರೆ, ಹದಿನೈದು ವರ್ಷಗಳ ನಂತರ ಮತ್ತೆ ಬಣ್ಣ ಬಳಿಯಲು ಹಣ ಬಿಡುಗಡೆಯಾಗಿತ್ತು. ಹಾಗೆ ಬಂದಿರುವ ಹಣದಲ್ಲಿ ನವೀಕರಿಸಿ ಹೊಸದಾಗಿ ಬಣ್ಣ ಬಳಿಯಲಾಯಿತು. ಬಳಿಕ ವಿ.ಶ್ರೀನಿವಾಸ್ ಪ್ರಸಾದ್ ಹೆಸರನ್ನು ಮತ್ತೆ ಬರೆಯಲಾಯಿತು. ಅಂದು ಭವನ ನಿರ್ಮಾಣಗೊಂಡ ಮತ್ತು ಈಗಲೂ ಸಹ ಅವರೇ ಸಂಸದರಾಗಿದ್ದರೂ ಸಹ‌ ಗುತ್ತಿಗೆದಾರ ಮಾತ್ರ ವಿ.ಶ್ರೀನಿವಾಸ್ ಪ್ರಸಾದ್, "ವಿಧಾನಸಭಾ ಸದಸ್ಯ" ಎಂದೇ ಬರೆದಿದ್ದಾರೆ.

ಈ ಅಚಾತುರ್ಯಕ್ಕೆ ಸಂಸದ ವಿ.ಶ್ರೀ ಅಭಿಮಾನಿಗಳು ಕೆಂಡವಾಗಿದ್ದು ಕೂಡಲೇ ಬೋರ್ಡ್​ನಲ್ಲಿರುವ ತಪ್ಪನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.