ETV Bharat / state

ಭಾರತ್ ಜೋಡೋ ಸಂಜೀವಿನಿ.. ಹೊಸ ರಾಹುಲ್ ಹೊಸ ಕಾಂಗ್ರೆಸ್: ಜೈರಾಮ್​ ರಮೇಶ್ ವ್ಯಾಖ್ಯಾನ - ಭಾರತ್ ಜೋಡೋ ಯಾತ್ರೆ

ಭಾರತ್ ಜೋಡೊ ಯಾತ್ರೆ ಅತಿದೊಡ್ಡ ಯಾತ್ರೆಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹೊಸ ಪರಿವರ್ತನೆ ತರಲಿದೆ. ಯಾತ್ರೆ ಮೂಲಕ ಹತ್ತಾರು ವಿಚಾರ, ಅಭಿಪ್ರಾಯ, ಸಂಸ್ಕೃತಿ ಒಂದಾಗುತ್ತಿದೆ ಎಂದು ಕಾಂಗ್ರೆಸ್ ವರಿಷ್ಠ ಜೈರಾಮ್​ ರಮೇಶ್ ಹೇಳಿದ್ದಾರೆ.

ಜೈರಾಮ್​ ರಮೇಶ್
ಜೈರಾಮ್​ ರಮೇಶ್
author img

By

Published : Sep 30, 2022, 7:21 PM IST

ಚಾಮರಾಜನಗರ: ಭಾರತ್ ಜೋಡೋ ಯಾತ್ರೆ ಪಕ್ಷಕ್ಕೆ ಸಂಜೀವಿನಿಯಾಗಿದೆ ಎಂದು ಕಾಂಗ್ರೆಸ್ ವರಿಷ್ಠ ಜೈರಾಮ್​ ರಮೇಶ್ ಹೇಳಿದ್ದಾರೆ. ಗುಂಡ್ಲುಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಈ ಯಾತ್ರೆ ಮೂಲಕ ಹೊಸ ಕಾಂಗ್ರೆಸ್ ಹಾಗೂ ಹೊಸ ರಾಹುಲ್ ಉದಯಿಸಿದ್ದಾರೆ ಎಂದು ವ್ಯಾಖ್ಯಾನಿಸಿದರು.

ಮೋದಿ ಒಂದು ರೀತಿ ಸರ್ವಜ್ಞಾನಿ, ಸರ್ವವ್ಯಾಪಿ, ಸರ್ವಶಕ್ತಿ ಅಂದುಕೊಂಡಿದ್ದು ಆರ್ಥಿಕ‌ ಅಸಮಾನತೆ, ಅಧಿಕಾರ ಕೇಂದ್ರೀಕರಣ ಮಾಡಿಕೊಂಡು ಪ್ರಜಾಪ್ರಭುತ್ವ ವಿರೋಧಿಯಾಗಿದ್ದಾರೆ. ರಾಜ್ಯಗಳ ಅಧಿಕಾರವನ್ನು ದುರ್ಬಲಗೊಳಿಸಿ ಎಲ್ಲದಕ್ಕೂ ಕೇಂದ್ರದ ಬಳಿ ಭಿಕ್ಷೆ ಬೇಡುವ ಸ್ಥಿತಿ ನಿರ್ಮಿಸಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ: ಭಾರತ್ ಜೋಡೋ ಅಲ್ಲಾ ತೋಡೋ ಭಾರತ್ ಎಂದು ಬಿಜೆಪಿ ವ್ಯಂಗ್ಯ ಮಾಡುತ್ತಿರುವುದು ನಮ್ಮ ಯಾತ್ರೆಯಿಂದ ಆತಂಕಗೊಂಡು. ಕಾಂಗ್ರೆಸ್​ಗೆ ಇದು ಬೂಸ್ಟರ್ ಡೋಸ್ ಕೊಡುತ್ತಿದ್ದರೆ, ಬಿಜೆಪಿ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಬಿಜೆಪಿ ಈ ರಾಜಕಾರಣವನ್ನು ಎದುರಿಸಲು ಸಜ್ಜಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ಅವರದ್ದು ಸೂಪರ್ ಹೈಕಮಾಂಡ್ ಸಂಸ್ಕೃತಿ: ಹೈಕಮಾಂಡ್ ಸಂಸ್ಕೃತಿ ಎಂದು ಬಿಜೆಪಿ ಟೀಕಿಸುತ್ತಿದೆ. ನಮ್ಮದು ಬಿಜೆಪಿಗಿಂತ ಹೆಚ್ಚು ಆಂತರಿಕ ಪ್ರಜಾಪ್ರಭುತ್ವ ಹೊಂದಿದೆ. ನಮ್ಮದು ಹೈಕಮಾಂಡ್ ಸಂಸ್ಕೃತಿಯಾದರೇ ಬಿಜೆಪಿ ಅವರದ್ದು ಸೂಪರ್ ಹೈಕಮಾಂಡ್ ಸಂಸ್ಕೃತಿಯಾಗಿದೆ. ಎಲ್ಲವನ್ನೂ ನಡ್ಡಾ ಮೇಲಿನವರನ್ನು ಕೇಳಿಕೊಂಡು ಆದೇಶಿಸುತ್ತಾರೆ ಎಂದು ಲೇವಡಿ ಮಾಡಿದರು.

ಹೊಸ ಪರಿವರ್ತನೆ ತರಲಿದೆ: ಭಾರತ್ ಜೋಡೊ ಯಾತ್ರೆ ಅತಿದೊಡ್ಡ ಯಾತ್ರೆಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹೊಸ ಪರಿವರ್ತನೆ ತರಲಿದೆ. ಯಾತ್ರೆ ಮೂಲಕ ಹತ್ತಾರು ವಿಚಾರ, ಅಭಿಪ್ರಾಯ, ಸಂಸ್ಕೃತಿ ಒಂದಾಗುತ್ತಿದೆ ಎಂದರು.

ಓದಿ: ಭಾರತದ ಐತಿಹಾಸಿಕ ಪಾದಯಾತ್ರೆ ಹಾಗೂ ಕರ್ನಾಟಕದ ರಾಜಕೀಯ ಪಾದಯಾತ್ರೆಗಳಿಂದಾದ ಅನುಕೂಲಗಳೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.