ಚಾಮರಾಜನಗರ: ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳು ಕೂಡುವ ಪ್ರದೇಶ ಬಂಡೀಪುರ ಆಗಿರುವುದರಿಂದ ನಕ್ಸಲರು ನುಸುಳಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಕೇರಳದಿಂದ ತಮಿಳುನಾಡಿಗೆ ತೆರಳುವಾಗ ನಕ್ಸಲರು ಬೇರಂಬಾಡಿ ಸ್ಟೇಟ್ ಫಾರೆಸ್ಟ್ ಬಳಿ ಸೆಟಲೈಟ್ ಫೋನ್ ಬಳಕೆ ಮಾಡಿರುವ ಬಗ್ಗೆ ಗುಪ್ತಚರ ವಿಭಾಗ ಮಾಹಿತಿ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬುಧವಾರ ಎಸ್ಪಿ ಆನಂದ ಕುಮಾರ್ ಸ್ಥಳ ಪರಿಶೀಲನೆ ನಡೆಸಿದ್ದು, ನಕ್ಸಲ್ ನಿಗ್ರಹ ಪಡೆ ಮತ್ತು ಪೊಲೀಸರು ಬಂಡೀಪುರ ಕಾಡಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.