ETV Bharat / state

ಚಾಮರಾಜನಗರ: ಅನಗತ್ಯವಾಗಿ ಬೀದಿಗಿಳಿದವರ ಬಳಿ ದಂಡ ಕಟ್ಟಿಸಿದ ಪೊಲೀಸರು - ದಂಡ ಕಟ್ಟಿಸಿದ ಪೊಲೀಸರು

ಅನಗತ್ಯ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲು ಮುಂದಾದ ಪೊಲೀಸರು ಚಾಮರಾಜನಗರದ ಭುವನೇಶ್ವರಿ ವೃತ್ತದ ನಾಲ್ಕು ಕಡೆಗಳಲ್ಲಿ ಬ್ಯಾರಿಕೇಡ್ ಇಟ್ಟು ಅನಗತ್ಯ ಸವಾರರ ಜೇಬು ಬರಿದು ಮಾಡಿದರು.

chamrajnagara-police-collected-fine
ದಂಡ ಕಟ್ಟಿಸಿದ ಪೊಲೀಸರು
author img

By

Published : May 8, 2021, 9:35 PM IST

ಚಾಮರಾಜನಗರ: ಮೇ.10 ರಿಂದ 24ರ ವರೆಗೆ ಲಾಕ್​​​ಡೌನ್ ಘೋಷಣೆಯಾದ ಬೆನ್ನಲ್ಲೇ ಚಾಮರಾಜನಗರದಲ್ಲಿ ಪೊಲೀಸರು ಇಂದು ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಿ, ಕೆಲವರಿಗೆ ದಂಡದ ಬಿಸಿ ಮುಟ್ಟಿಸಿದರು.

ದಂಡ ಕಟ್ಟಿಸಿದ ಪೊಲೀಸರು

ಓದಿ: 860 ಕೋಟಿ ರೂ. ಮೌಲ್ಯದ 126 ಕೆಜಿ ಹೆರಾಯಿನ್​ ವಶ, ದಂಪತಿ ಬಂಧನ

ಅಗತ್ಯ ದಿನಬಳಕೆ ವಸ್ತುಗಳ ಮಾರಾಟ ಮತ್ತು ಕೊಂಡುಕೊಳ್ಳುವಿಕೆಗೆ ಬೆಳಗ್ಗೆ 6 ರಿಂದ 12 ಗಂಟೆಯ ವರೆಗೆ ನೀಡಿದ್ದ ಸಮಯ ಮುಗಿದರೂ ಬಹುತೇಕರು ರಸ್ತೆಯಲ್ಲಿ ಅನಗತ್ಯವಾಗಿ ವಾಹನಗಳ ಮೂಲಕ ಸಂಚರಿಸುತ್ತಿದ್ದರು. ಅನಗತ್ಯ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲು ಮುಂದಾದ ಪೊಲೀಸರು ಚಾಮರಾಜನಗರದ ಭುವನೇಶ್ವರಿ ವೃತ್ತದ ನಾಲ್ಕು ಕಡೆಗಳಲ್ಲಿ ಬ್ಯಾರಿಕೇಡ್ ಇಟ್ಟು ಅನಗತ್ಯ ಸವಾರರ ಜೇಬು ಬರಿದು ಮಾಡಿದರು.

ಅಗತ್ಯ ಸೇವಾ ಸರಬರಾಜು ವಾಹನಗಳು ಹಾಗೂ ಆಸ್ಪತ್ರೆಗೆ ತೆರಳುವ ರೋಗಿಗಳ ವಾಹನಗಳಿಗೆ ತೆರಳಲು ಅವಕಾಶವಿದೆ ಎಂದು ಮಾಸ್ಕ್ ಧರಿಸದೇ ಬೇಕಾಬಿಟ್ಟಿ ಇದ್ದವರಿಗೂ ದಂಡ ಹಾಕಿ ಬಿಸಿ ಮುಟ್ಟಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.