ETV Bharat / state

ಮುಳ್ಳಿನ ಪೊದೆಗೆ ಹಾರಿದ ಭಕ್ತಾದಿಗಳು: ಇದು ಈ ಜಾತ್ರೆಯ ವಿಶೇಷ! - ಭಕ್ತಾದಿಗಳು

ಪ್ರತೀ ವರ್ಷ ಚಾಮರಾಜನಗರ ತಾಲೂಕಿನ ಯಳಂದೂರು ಸಮೀಪದ ಗೂಳಿಪುರದಲ್ಲಿ ನಡೆಯುವ ಜಾತ್ರೆ ವೇಳೆ ಮುಳ್ಳಿನ ಪೊದೆ ಮೇಲೆ ಹಾರುವ ಮೂಲಕ ಭಕ್ತಾದಿಗಳು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ.

ಮುಳ್ಳಿನ ಪೊದೆಗೆ ಹಾರಿದ ಭಕ್ತಾದಿಗಳು
author img

By

Published : Mar 19, 2019, 12:26 PM IST

ಚಾಮರಾಜನಗರ: ಕಬ್ಬಿಣದ ಸರಳು ಚುಚ್ಚಿಕೊಳ್ಳುವುದು, ಈಡುಗಾಯಿ ಒಡೆಯುವುದು, ಕೊಂಡ ಹಾಯುವುದನ್ನು ನೋಡಿದ್ದೀರಿ. ಆದರೆ ಮುಳ್ಳಿನ ಪೊದೆಗೆ ಭಕ್ತಾದಿಗಳು ಹಾರುವ ವಿಶೇಷ ಹಬ್ಬದ ದೃಶ್ಯ ಕಂಡುಬಂತು.

ಮುಳ್ಳಿನ ಪೊದೆಗೆ ಹಾರಿದ ಭಕ್ತಾದಿಗಳು

ಚಾಮರಾಜನಗರ ತಾಲೂಕಿನ ಯಳಂದೂರು ಸಮೀಪದ ಗೂಳಿಪುರ ಎಂಬ ಊರಲ್ಲಿ ಪ್ರತಿ ವರ್ಷ ನಡೆಯುವ ಮಾರಮ್ಮನ ಹಬ್ಬದಂದು ಒಂದು ಸಮುದಾಯದ ಜನರು ಮುಳ್ಳಿನ ಪೊದೆಗಳಿಗೆ ಹಾರಿ ಭಕ್ತಿ ಮೆರೆಯುತ್ತಾರೆ. ಗ್ರಾಮದ ಉರುಕಾತಮ್ಮ, ಕುಂಟು ಮಾರಮ್ಮ ಹಾಗೂ ಬಿಸಿಲು ಮಾರಮ್ಮ ಗ್ರಾಮ ದೇವತೆಗಳ ಜಾತ್ರೆಯಲ್ಲಿ ರಾಶಿ-ರಾಶಿ ಇರುವ ಮುಳ್ಳಿನ ಪೊದೆಗಳಿಗೆ ಭಕ್ತರು ಹಾರಿ ಭಕ್ತಿಯ ಪರಾಕಷ್ಠೆ ಮೆರೆಯುತ್ತಾರೆ.

ಅಂದಹಾಗೆ, ಮೊದಲಿಗೆ ಮಾರಮ್ಮ ದೇವಿಯ ಮುಖ್ಯ ಅರ್ಚಕ ಮಾರಮ್ಮ ಆವಾಹನೆ ಆಗಿದ್ದಾಳೆಂದು ಹಾರಲಿದ್ದು, ಬಳಿಕ ಗ್ರಾಮದ ಹಲವರು ಓಡಿ ಮುಳ್ಳಿನ ಪೊದೆಗಳಿಗೆ ಹಾರುತ್ತಾರೆ. ಡೊಳ್ಳಿನ ಸದ್ದು- ದೇವರ ನಾಮ ಸ್ಮರಣೆಯ ಜೊತೆಗೂಡಿ ಮುಳ್ಳಿನ ಪೊದೆಗಳಿಗೆ ಹಾರುವ ಮೈನವಿರೇಳಿಸುವ ಸನ್ನಿವೇಶವನ್ನು ಸಾವಿರಾರು ಮಂದಿ ನಿನ್ನೆ ಕಣ್ತುಂಬಿಕೊಂಡರು.

Intro:Body:

ಮುಳ್ಳಿನ ಪೊದೆಗೆ ಹಾರಿದ ಭಕ್ತಾದಿಗಳು: ಇದು ಇಲ್ಲಿನ ವಿಶೇಷತೆ!!!

ಚಾಮರಾಜನಗರ: ಕಬ್ಬಿಣದ ಸರಳು ಚುಚ್ಚಿಕೊಳ್ಳುವುದು, ಈಡುಗಾಯಿ ಒಡೆಯುವುದು, ಕೊಂಡ ಹಾಯುವುದನ್ನು ನೋಡಿದ್ದೀರಿ ಆದರೆ ಮುಳ್ಳಿನ ಪೊದೆಗೆ ಭಕ್ತಾದಿಗಳು ಹಾರುವ ವಿಶೇಷ ಹಬ್ಬದ ಸುದ್ದಿ ಇಲ್ಲಿದೆ ನೋಡಿ

ಚಾಮರಾಜನಗರ ತಾಲೂಕಿನ ಯಳಂದೂರು ಸಮೀಪದ ಗೂಳಿಪುರ ಎಂಬ ಊರಲ್ಲಿ ಪ್ರತಿ ವರ್ಷ ನಡೆಯುವ ಮಾರಮ್ಮನ ಹಬ್ಬದಂದು ಒಂದು ಸಮುದಾಯದ ಜನರು ಮುಳ್ಳಿನ ಪೊದೆಗಳಿಗೆ ಹಾರಿ ಭಕ್ತಿ ಮೆರೆಯುತ್ತಾರೆ.

ಗ್ರಾಮದ ಉರುಕಾತಮ್ಮ, ಕುಂಟು ಮಾರಮ್ಮ ಹಾಗೂ ಬಿಸಿಲು ಮಾರಮ್ಮ ಗ್ರಾಮ ದೇವತೆಗಳ ಜಾತ್ರೆಯಲ್ಲಿ ರಾಶಿ-ರಾಶಿ ಇರುವ ಮುಳ್ಳಿನ ಪೊದೆಗಳಿಗೆ ಭಕ್ತರು ಹಾರಿ ಭಕ್ತಿ ಪರಾಕಷ್ಠೆ ಮೆರೆಯುತ್ತಾರೆ. ಅಂದಹಾಗೆ,ಮೊದಲಿಗೆ ಮಾರಮ್ಮ ದೇವಿಯ ಮುಖ್ಯ ಅರ್ಚಕ ಮಾರಮ್ಮ ಆಹಾವನೆ ಆಗಿದ್ದಾಳೆಂದು ಹಾರಲಿದ್ದು ಬಳಿಕ ಗ್ರಾಮದ ಹಲವರು ಓಡಿ ಮುಳ್ಳಿನ ಪೊದೆಗಳಿಗೆ ಹಾರುತ್ತಾರೆ.

ಢೋಳಿನ ಸದ್ದು- ದೇವರ ನಾಮ ಸ್ಮರಣೆಯ ಜೊತೆಗೂಡಿ ಮುಳ್ಳಿನ ಪೊದೆಗಳಿಗೆ ಹಾರುವ ಮೈನವಿರೇಳಿಸುವ ಸನ್ನಿವೇಶವನ್ನು ಸಾವಿರಾರು ಮಂದಿ ಸೋಮವಾರ ಕಣ್ತುಂಬಿಕೊಂಡರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.