ಚಾಮರಾಜನಗರ: ಪೊಲೀಸ್ ಗಣಪನೆಂದೇ ಕರೆಯುವ ದೊಡ್ಡ ಗಣಪತಿಯ ನಿಮಜ್ಜನ ಮೆರವಣಿಗೆ ಆರಂಭವಾಗಿದ್ದು ಎಸ್ ಪಿ ಹೆಚ್.ಡಿ.ಆನಂದಕುಮಾರ್ ಗಣೇಶನಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದ್ದಾರೆ.
ಕಂಸಾಳೆ, ಚಂಡೆ ಮದ್ದಳೆಯು ಮೆರವಣಿಗೆಗೆ ಮೆರುಗು ನೀಡಿತು. ಮೆರವಣಿಗೆಯುದ್ದಕ್ಕೂ ಭಾರೀ ಪೊಲೀಸ್ ಭದ್ರತೆ ಕೈಗೊಂಡಿದ್ದು 3 ಮಂದಿ ಡಿವೈಎಸ್ಪಿ, 7 ಮಂದಿ ಸಿಪಿಐ, 19 ಮಂದಿ ಪಿಎಸ್ಐ, 50ಮಂದಿ ಎಎಸ್ಐ, 400 ಮಂದಿ ಪೊಲೀಸ್ ಪೇದೆಗಳು, 5 ಕೆಎಸ್ಆರ್ಪಿ ತುಕಡಿ, 7 ಡಿಆರ್ ಹಾಗೂ 300 ಮಂದಿ ಗೃಹರಕ್ಷಕದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮೆರವಣಿಗೆ ತೆರಳುವ ಎಲ್ಲಾ ಸ್ಥಳಗಳಲ್ಲೂ ಶ್ವಾನದಳ ಮತ್ತು ಬಾಂಬ್ ಶೋಧ ಪಡೆ ಪರಿಶೀಲನೆ ನಡೆಸಿ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ.
ದಲಿತರ ಬೀದಿಗೆ ಮೊದಲು ಗಣಪನ ಮೆರವಣಿಗೆ ತೆರಳಿ ಪ್ರಥಮ ಪೂಜೆ ಸ್ವೀಕರಿಸುವುದು ದೊಡ್ಡ ಗಣಪತಿ ಮೆರವಣಿಗೆಯ ವಿಶಿಷ್ಟವಾಗಿದೆ.