ETV Bharat / state

ಮಾಸ್ಕ್ ಧರಿಸುವಂತೆ ಸಿಟಿ ರೌಂಡ್ಸ್ ಹಾಕಿದ ಚಾಮರಾಜನಗರ ಡಿಸಿ, ಎಸ್ಪಿ.. ನಿಯಮ ಮೀರಿದವರಿಗೆ ದಂಡ! - ಮಾಸ್ಕ್ ಧರಿಸುವಂತೆ ಸಿಟಿ ರೌಂಡ್ಸ್ ಹಾಕಿದ ಚಾಮರಾಜನಗರ ಡಿಸಿ ಎಸ್ಪಿ

ಮಾಸ್ಕ್ ಧರಿಸದೇ ಚಿತ್ರೀಕರಣ ನಡೆಸುತ್ತಿದ್ದ ಧಾರವಾಹಿ ತಂಡವೊಂದಕ್ಕೆ ಕ್ಲಾಸ್ ತೆಗೆದುಕೊಂಡ ಡಿಸಿ, ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚುತ್ತಿವೆ. ಯಾವುದೇ ಕಾರಣಕ್ಕೂ ಅಸಡ್ಡೆ ಪ್ರದರ್ಶಿಸಬೇಡಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಕೊರೊನಾ ನಿಯಮ ಪಾಲಿಸುವ ಬಗ್ಗೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ತಂಡಕ್ಕೆ ಪಾಠ ಮಾಡಿದರು..

ಮಾಸ್ಕ್ ಧರಿಸುವಂತೆ ಸಿಟಿ ರೌಂಡ್ಸ್ ಹಾಕಿದ ಚಾಮರಾಜನಗರ ಡಿಸಿ, ಎಸ್ಪಿ

author img

By

Published : Jan 4, 2022, 3:02 PM IST

ಚಾಮರಾಜನಗರ : ಮಾಸ್ಕ್ ಧರಿಸದೇ ಅಸಡ್ಡೆಯಿಂದ ಅಂಗಡಿಯಲ್ಲಿ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕ್ಲಾಸ್ ತೆಗೆದುಕೊಂಡು ಕೊರೊನಾ ಎಚ್ಚರಿಕೆ ನೀಡಿದರು.

ಕೊರೊನಾ ನಿಯಮ ಕಟ್ಟುನಿಟ್ಟಿನ ಜಾರಿಗಾಗಿ ವಿಶೇಷ ಕಾರ್ಯಪಡೆಯಾದ ಸುರಕ್ಷಾ ಪಡೆಯ ಜಾಥಾಗೆ ಚಾಲನೆ ಕೊಟ್ಟ ಡಿಸಿ ಚಾರುಲತಾ ಸೋಮಲ್ ಹಾಗೂ ಎಸ್ಪಿ ದಿವ್ಯಾ ಸಾರಾ ಥಾಮಸ್, ನಗರ ಪ್ರದಕ್ಷಿಣೆ ನಡೆಸಿ ಕೊರೊನಾ ಅರಿವು ಮೂಡಿಸಿದರು. ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೆಪಿಸಿದರು. ಕೊರೊನಾ ಕುರಿತಂತೆ ಭಯ ಬೇಡ. ಆದರೆ, ಎಚ್ಚರಿಕೆಯಿಂದಿರಿ ಎಂದು ತಿಳಿ ಹೇಳಿದರು.

ಮಾಸ್ಕ್ ಧರಿಸುವಂತೆ ಸಿಟಿ ರೌಂಡ್ಸ್ ಹಾಕಿದ ಚಾಮರಾಜನಗರ ಡಿಸಿ, ಎಸ್ಪಿ

ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಅಸಡ್ಡೆಯಿಂದ ಇದ್ದ ಭುವನೇಶ್ವರಿ ವೃತ್ತದ ಮೊಬೈಲ್ ಅಂಗಡಿ, ಚಿಕ್ಕಂಗಡಿ ಬೀದಿಯ ಪಾತ್ರೆ ಅಂಗಡಿಯನ್ನು ಮುಚ್ಚಿಸಿ ತಾತ್ಕಾಲಿಕವಾಗಿ ಅವರ ವ್ಯಾಪಾರ ಲೈಸೆನ್ಸ್ ಅನ್ನು ರದ್ದುಗೊಳಿಸಿ, ದಂಡ ವಿಧಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಮಾಸ್ಕ್ ಧರಿಸದೇ ಚಿತ್ರೀಕರಣ ನಡೆಸುತ್ತಿದ್ದ ಧಾರವಾಹಿ ತಂಡವೊಂದಕ್ಕೆ ಕ್ಲಾಸ್ ತೆಗೆದುಕೊಂಡ ಡಿಸಿ, ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚುತ್ತಿವೆ. ಯಾವುದೇ ಕಾರಣಕ್ಕೂ ಅಸಡ್ಡೆ ಪ್ರದರ್ಶಿಸಬೇಡಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಕೊರೊನಾ ನಿಯಮ ಪಾಲಿಸುವ ಬಗ್ಗೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ತಂಡಕ್ಕೆ ಪಾಠ ಮಾಡಿದರು.

ಇನ್ನು, ಯೋಜನಾ ನಿರ್ದೇಶಕ ಸುರೇಶ್, ನಗರಸಭೆ ಆಯುಕ್ತ ಕರಿಬಸವಯ್ಯ ಹಾಗೂ ಪೊಲೀಸರು ಡಿಸಿ ಅವರಿಗೆ ಸಾಥ್ ಕೊಟ್ಟರು. ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಗೆ ಮಾಸ್ಕ್ ಕೊಟ್ಟು ದಂಡ ವಿಧಿಸಿದರು. ಬಸ್‌ಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ತಿಳಿ ಹೇಳಿದರು‌.

ಇಂದಿನಿಂದ ಸುರಕ್ಷಾ ಪಡೆಯ 65 ಮಂದಿ ಸ್ವಯಂಸೇವಕರು, ಪೊಲೀಸರು ಜಿಲ್ಲಾದ್ಯಂತ ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸಲಿದ್ದಾರೆ. ಜನರು ಅಸಡ್ಡೆಯಿಂದ ಓಡಾಡುತ್ತಿದ್ದ ಕುರಿತು ಈಟಿವಿ ಭಾರತ ಸೋಮವಾರವಷ್ಟೇ ವರದಿ ಬಿತ್ತರಿಸಿ ಗಮನ ಸೆಳೆದಿತ್ತು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.