ಚಾಮರಾಜನಗರ: ಸಿದ್ದರಾಮಯ್ಯ ಅವರ ಅಹಂಕಾರದ ಮಾತುಗಳಿಂದಲೇ ಬಹುಮತದಿಂದ ಇದ್ದ ಕಾಂಗ್ರೆಸ್ ಸರ್ಕಾರ ಇಂದು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹಿರಿಯ ನಾಯಕರು. ಒಂದು ವರ್ಗದ ಜನರ ಭಾವನೆಗೆ ನೋವುಂಟು ಮಾಡುವಂತೆ ಮಾತನಾಡುವುದು ಅವರಿಗೆ ಶೋಭೆತರುವಂತಹದ್ದಲ್ಲ. ಗೋಮಾಂಸ ತಿನ್ನುವ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಎನ್ನುವ ಆಸೆ ಇದೆ. ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅನ್ನು ವಿರೋಧ ಪಕ್ಷದಲ್ಲಿ ಕೂರಿಸಬೇಕೆನ್ನುವ ಆಸೆ ಅವರದ್ದಾಗಿದೆ. ಅವರ ಪಕ್ಷದಲ್ಲಿರುವ ಒಳ ಜಗಳಗಳಿಂದ ಸಿದ್ದರಾಮಯ್ಯ ಅವರು ಇಂತಹ ಮಾತುಗಳನ್ನು ಆಡುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಧರ್ಮೇಗೌಡ ಸಭ್ಯ ರಾಜಕಾರಣಿ, ಯಾರಿಗೂ ನೋವು ಬಯಸಿದವರಲ್ಲ: ರವಿಕುಮಾರ್
ವಿಧಾನಪರಿಷತ್ ಉಪ ಸಭಾಪತಿ ಧರ್ಮೇಗೌಡ ಅವರ ಆತ್ಮಹತ್ಯೆ ಬಹಳ ನೋವಿನ ಸಂತಿಯಾಗಿದೆ. ಅವರೇನು ಪುಕ್ಕಲ ರಾಜಕಾರಣಿಯಲ್ಲ. ಹೋರಾಟಗಳಿಂದ ಬೆಳೆದು ಬಂದು ರಾಜಕೀಯ ಪ್ರವೇಶ ಮಾಡಿದ ಧೀಮಂತ ರಾಜಕಾರಣಿ. ಅವರ ಸಾವು ದುರ್ದೈವದ ಸಂಗತಿಯಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದರು.