ಚಾಮರಾಜನಗರ: ಬೀಡಿ ವಿಚಾರಕ್ಕೆ ಅಣ್ಣನನ್ನೇ ತಮ್ಮನೋರ್ವ ಇರಿದು ಕೊಂದಿರುವ ಘಟನೆ ಗುರುವಾರ ರಾತ್ರಿ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ನಡೆದಿದೆ.
ಮಧುವನಹಳ್ಳಿ ಗ್ರಾಮದ ಸಿದ್ದಪ್ಪಸ್ವಾಮಿ(42) ಕೊಲೆಗೀಡಾಗಿರುವ ವ್ಯಕ್ತಿ. ಚಿಕ್ಕಪ್ಪನ ಮಗನಾದ ಬಿಸಲಸ್ವಾಮಿ(22) ಕೊಲೆ ಆರೋಪಿ. ಗಾಂಜಾ ಮತ್ತಿನಲ್ಲಿದ್ದ ಬಿಸಲಸ್ವಾಮಿ ಮನೆ ಹೊರಗಡೆ ಕುಳಿತಿದ್ದ ಸಿದ್ದಪ್ಪಸ್ವಾಮಿಯನ್ನು ಬೀಡಿ ಕೇಳಿದ್ದ. ಆತ ಬೀಡಿ ಇಲ್ಲಾ ಎಂದಾಗ ಮಾತಿಗೆ ಮಾತು ಬೆಳೆದು ಬಿಸಲಸ್ವಾಮಿ, ಸಿದ್ದಪ್ಪಸ್ವಾಮಿಗೆ ಚಾಕು ಇರಿದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ವಾರಸುದಾರರಿಗೆ ನೀಡಲಾಗಿದೆ. ಆರೋಪಿ ಪತ್ತೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.