ETV Bharat / state

ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆರಂಭ: ಸ್ಥಳೀಯರ ಅಸಮಾಧಾನ - chamarajnagar factory latest news

ಮಿಳುನಾಡು ಕಾರ್ಮಿಕರು ಹಾಗೂ ಪಕ್ಕದ ಜಿಲ್ಲೆಗಳಿಂದ ಕಬ್ಬು ತರುವ ಜನರಿಂದ ಕೊರೊನಾ ಬರುವ ಸಾಧ್ಯತೆ ಹೆಚ್ವಿದೆ. ಜಿಲ್ಲಾಡಳಿತ ಸೂಕ್ಷ್ಮವಾಗಿ ಪರಿಗಣಿಸದಿದ್ದರೆ ಚಾಮರಾಜನಗರವೂ ಕೊರೊನಾ ಸಂಕಷ್ಟ ಎದುರಿಸಬೇಕಾದಿತು ಎಂದು ರೈತ ಸಂಘದ ಮುಖಂಡ ಎಚ್ಚರಿಸಿದ್ದಾರೆ.

bannari amman factory
ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ
author img

By

Published : Apr 28, 2020, 5:28 PM IST

ಚಾಮರಾಜನಗರ: ಕೊಳ್ಳೇಗಾಲದ ಕುಂತೂರು ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖನೆ ಪ್ರಾರಂಭವಾಗಿರುವುದು ಸ್ಥಳೀಯ ಜನತೆಗೆ ಭಾರಿ ತಲೆನೋವಾಗಿ ಪರಿಣಮಿಸಿದೆ. ಕೊರೊನಾ ಮುಕ್ತವಾಗಿರುವ ಜಿಲ್ಲೆಗೆ ಎಲ್ಲಿ ಕೊರೊನಾ ಬರುವುದೋ ಎಂದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ.

ಈ ಬಗ್ಗೆ ರೈತ ಮುಖಂಡ ಪ್ರಭು ರಾಜೇ ಅರಸ್ ಮಾತನಾಡಿ, ರೈತರ ಅನುಕೂಲಕ್ಕಾಗಿ ತೆರೆದ ಸಕ್ಕರೆ ಕಾರ್ಖನೆ ಇದೀಗ ಗ್ರಾಮಸ್ಥರಲ್ಲಿ ಭಯ ತಂದಿದೆ. ತಮಿಳುನಾಡು ಕಾರ್ಮಿಕರು ಹಾಗೂ ಪಕ್ಕದ ಜಿಲ್ಲೆಗಳಿಂದ ಕಬ್ಬು ತರುವ ಜನರಿಂದ ಕೊರೊನಾ ಬರುವ ಸಾಧ್ಯತೆ ಹೆಚ್ವಿದೆ. ಜಿಲ್ಲಾಡಳಿತ ಸೂಕ್ಷ್ಮವಾಗಿ ಪರಿಗಣಿಸದಿದ್ದರೆ ಚಾಮರಾಜನಗರವೂ ಕೊರೊನಾ ಸಂಕಷ್ಟ ಎದುರಿಸಬೇಕಾದಿತು ಎಂದು ಎಚ್ಚರಿಸಿದ್ದಾರೆ.

ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ

ಏನಾದರೂ ಸಮಸ್ಯೆಯಾದರೆ ಸರ್ಕಾರ ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಯೇ ನೇರ ಹೊಣೆಯಾಗುತ್ತದೆ. ಜುಬಿಲಂಟ್ ಪ್ರಕರಣ ನಮ್ಮ ಕಣ್ಮುಂದೆಯೇ ಇರುವಾಗಲೂ ಈ ನಿರ್ಲಕ್ಷ್ಯ ಏಕೆ? ಜಿಲ್ಲಾಡಳಿತ ಕೊರೊನಾ ನಿಗ್ರಹಿಸುವುದಕ್ಕೆ ಸಾಕಷ್ಟು ಶ್ರಮಿಸುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.