ETV Bharat / state

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ CA|TS ಮಾನ್ಯತೆ - ಚಾಮರಾಜನಗರ ಜಿಲ್ಲೆ

ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ಸಂರಕ್ಷಣೆಗೆ ಕೈಗೊಂಡ ಕ್ರಮಗಳು, ಅರಣ್ಯ ರಕ್ಷಣೆ ಜೊತೆಗೆ ಹುಲಿ ಅವಾಸ ಸ್ಥಾನಗಳ ಪರಿಣಾಮಕಾರಿ ಅಭಿವೃದ್ಧಿಗಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಿಎ/ಟಿಎಸ್ ಮಾನ್ಯತೆ ನೀಡಲಾಗಿದೆ. ಹುಲಿ ದಿನಾಚರಣೆ ಪ್ರಯುಕ್ತ ಇಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ದೇಶದ 14 ಹುಲಿ ಸಂರಕ್ಷಿತ ಪ್ರದೇಶಗಳಿಗೆ ಈ ಮಾನ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.

Bandipur tiger Reserved area got CA| TS exposure
Good news: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ CA|TS ಮಾನ್ಯತೆ!
author img

By

Published : Jul 29, 2021, 10:53 PM IST

ಚಾಮರಾಜನಗರ: ಹುಲಿ ಸಂರಕ್ಷಣೆಗೆ ಕೈಗೊಂಡ ಕ್ರಮಗಳು, ಅರಣ್ಯ ರಕ್ಷಣೆ ಜೊತೆಗೆ ಹುಲಿ ಅವಾಸ ಸ್ಥಾನಗಳ ಪರಿಣಾಮಕಾರಿ ಅಭಿವೃದ್ಧಿಗೆ ನೀಡಲಾಗುವ ಜಾಗತಿಕ ಸಂರಕ್ಷಣೆ ಭರವಸೆ/ ಟೈಗರ್ ಸ್ಟ್ಯಾಂಡರ್ಡ್ಸ್ ಸಿಎ/ಟಿಎಸ್ ಪ್ರಮಾಣ ಪತ್ರವನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ನೀಡಲಾಗಿದೆ.

ಹುಲಿ ದಿನಾಚರಣೆ ಪ್ರಯುಕ್ತ ಇಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್, ದೇಶದ 14 ಹುಲಿ ಸಂರಕ್ಷಿತ ಪ್ರದೇಶಗಳಿಗೆ ಈ ಮಾನ್ಯತೆ ನೀಡಿದ್ದು ಇದರಲ್ಲಿ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವೂ ಒಂದಾಗಿದೆ ಎಂದು ಹೇಳಿದ್ದಾರೆ. ಹುಲಿ ಸಂರಕ್ಷಣೆ ನಿರ್ವಹಣೆಯ ಉತ್ತಮ ಕ್ರಮಗಳನ್ನು ಅಂತಾರಾಷ್ಟ್ರೀಯ ಮಟ್ಟದ ತಜ್ಞರು ರೂಪಿಸಿದ್ದು, ಆ ಮಾನದಂಡಗಳಂತೆ ಸಂರಕ್ಷಣಾ ಕಾರ್ಯ ನಡೆದಿದ್ದರೆ ಈ ಮಾನ್ಯತೆ ದೊರೆಯಲಿದೆ.

ಇದನ್ನೂ ಓದಿ: ದೇಶದ 14 ಹುಲಿ ಸಂರಕ್ಷಿತ ಪ್ರದೇಶಗಳಿಗೆ ಜಾಗತಿಕ ಮಾನ್ಯತೆ: ಬಂಡೀಪುರ ಕೂಡ ಅತ್ಯುತ್ತಮ

ಏನಿದು ಸಿಎ/ಟಿಎಸ್ ಮಾನದಂಡ?

ಸಿಎ/ಟಿಎಸ್ ಮಾನದಂಡವು ಜಾಗತಿಕವಾಗಿ ಒಪ್ಪಿದ ಹುಲಿಗಳ ಸಂರಕ್ಷಣಾ ಮಾರ್ಗಸೂಚಿಯಾಗಿದ್ದು ಪ್ರಮುಖ 7 ದೇಶಗಳಲ್ಲಿ ಇದು ಜಾರಿಯಲ್ಲಿದೆ. ದೇಶದ 51 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 14 ಪ್ರದೇಶಗಳು ಮಾತ್ರ ಈಗ ಈ ಮಾನ್ಯತೆ ಪಡೆದಿದ್ದು, ಅದರಲ್ಲಿ ರಾಜ್ಯದ ಬಂಡೀಪುರವೂ ಒಂದಾಗಿದೆ. ರಾಜ್ಯದಲ್ಲಿ ಒಟ್ಟು 524 ಹುಲಿಗಳೊಂದಿಗೆ ದೇಶದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. 526 ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.