ETV Bharat / state

ಬಂದ್ ಎಫೆಕ್ಟ್: ಅನಾರೋಗ್ಯದಿಂದ ಕುಸಿದು ಬಿದ್ದ ವ್ಯಕ್ತಿಗೆ ಪೊಲೀಸರ ನೆರವು - bandh news 2020

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿವೋರ್ವ ಬಸ್​ಗಾಗಿ ಕಾಯುತ್ತ ನಿಂತಿದ್ದ ವೇಳೆ ದಿಢೀರ್​ ಕುಸಿದು ಬಿದ್ದರು. ಚಾಮರಾಜನಗರದ ಕೆಎಸ್ಆರ್​​ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಈ ಘಟನೆಯನ್ನು ಕಂಡ ಪಟ್ಟಣ ಠಾಣೆ ಪಿಐ ಮಹೇಶ್ ತಮ್ಮ ಜೀಪಿನಲ್ಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅವರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಅನಾರೋಗ್ಯದಿಂದ ಕುಸಿದು ಬಿದ್ದಾತನಿಗೆ ಪೊಲೀಸರ ನೆರವು

author img

By

Published : Dec 8, 2020, 10:07 AM IST

ಚಾಮರಾಜನಗರ: ಭಾರತ್ ಬಂದ್​ನಿಂದ ಕೆಲವರು ತೊಂದರೆಗೆ ಸಿಲುಕಿದ್ದಾರೆ. ವಿವಿಧ ಸಂಘಟನೆಗಳು ಹೆದ್ದಾರಿ ತಡೆದು ಬಸ್ ಸಂಚರಿಸಿದಂತೆ ಪ್ರತಿಭಟಿಸುತ್ತಿದ್ದ ವೇಳೆ, ಬಸ್​ಗಾಗಿ ಕಾಯುತ್ತಿದ್ದ ರೋಗಿವೋರ್ವ ಕುಸಿದುಬಿದ್ದ ಘಟನೆ ನಗರದ ಕೆಎಸ್ಆರ್​​ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಅನಾರೋಗ್ಯದಿಂದ ಕುಸಿದು ಬಿದ್ದಾತನಿಗೆ ಪೊಲೀಸರ ನೆರವು

ಈ ರೋಗಿಯನ್ನು ನೋಡಿದ ಕೂಡಲೇ ಪಟ್ಟಣ ಠಾಣೆ ಪಿಐ ಮಹೇಶ್ ತಮ್ಮ ಜೀಪಿನಲ್ಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕುಸಿದುಬಿದ್ದ ವ್ಯಕ್ತಿ ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದವರಾಗಿದ್ದು, ಜಯದೇವ ಆಸ್ಪತ್ರೆಗೆ ತೆರಳಬೇಕಿತ್ತು ಎಂದು ತಿಳಿದುಬಂದಿದೆ.

ಇದನ್ನು ಓದಿ:ಬೆಳಗಾವಿಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತ: ಪ್ರಯಾಣಿಕರು ಕಂಗಾಲು

ರೈತ ಹೋರಾಟಗಾರರು ಬಸ್ ಸಂಚಾರ ಆರಂಭಿಸದಂತೆ ಪಟ್ಟು ಹಿಡಿದು ನಿಲ್ದಾಣದ ದ್ವಾರದಲ್ಲೇ ಕುಳಿತು ಪ್ರತಿಭಟಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.