ETV Bharat / state

ಚಾಮರಾಜನಗರ ಆಕ್ಸಿಜನ್ ದುರಂತ: ತನಿಖಾ ಆಯೋಗದ ಕಚೇರಿ ಚಾಮರಾಜನಗರಕ್ಕೆ ಸ್ಥಳಾಂತರಿಸಲು ಎಸ್​ಡಿಪಿಐ ಒತ್ತಾಯ

ಆಮ್ಲಜನಕ ದುರಂತ ಪ್ರಕರಣ ಸಂಬಂಧ ಈಗಾಗಲೇ ಆಯೋಗದಿಂದ ತನಿಖೆ ಮುಂದುವರಿದಿದೆ. ಆದರೆ ತನಿಖಾ ಆಯೋಗದ ಕಚೇರಿಯ ಕಚೇರಿ ಮೈಸೂರಿನಲ್ಲಿದ್ದು, ಇದರಿಂದ ಸಂತ್ರಸ್ತರಿಗೆ ದೂರು ನೀಡಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಚಾಮರಾಜನಗರಕ್ಕೆ ಕಚೇರಿ ಸ್ಥಳಾಂತರಿಸಲು ಮನವಿ ಮಾಡಲಾಗಿದೆ.

appeal to evacuate enquiry office to Chamarajnagar
ತನಿಖಾ ಆಯೋಗದ ಕಚೇರಿ ಚಾಮರಾಜನಗರಕ್ಕೆ ಸ್ಥಳಾಂತರಿಸಲು ಆಗ್ರಹ
author img

By

Published : Jun 20, 2021, 7:20 PM IST

ಚಾಮರಾಜನಗರ: ಆಮ್ಲಜನಕ ದುರಂತದ ತನಿಖಾ ಆಯೋಗದ ಕಚೇರಿಯನ್ನು ಮೈಸೂರಿನಿಂದ ಚಾಮರಾಜನರಕ್ಕೆ ಸ್ಥಳಾಂತರಿಸಬೇಕೆಂದು ಎಸ್​​ಡಿಪಿಐ ಸಂಘಟನೆ ಒತ್ತಾಯಿಸಿ ನ್ಯಾ. ಬಿ.ಎ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸಂತ್ರಸ್ತರು ಚಾಮರಾಜನಗರ ಜಿಲ್ಲೆಯ ಬೇರೆ ಬೇರೆ ತಾಲೂಕಿನ ಹಳ್ಳಿಗಳಲ್ಲಿ ವಾಸ ಮಾಡುತ್ತಿದ್ದಾರೆ. ಇವರು ತಮ್ಮ ದೂರು ಬರೆಸಲು, ಟೈಪ್ ಮಾಡಿಸಲು ಮತ್ತು ಅಫಿಡವಿಡ್​ ಮಾಡಿಸಲು ತಾಲೂಕು ಕೇಂದ್ರಗಳಿಗೆ ಅಥವಾ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಬರಬೇಕು. ಲಾಕ್​ಡೌನ್ ಇರುವುದರಿಂದ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಸಹ ಟೈಪಿಂಗ್ ಮಳಿಗೆಗಳು ಇಲ್ಲ. ಮೈಸೂರಿಗೆ ಬಂದು ಹೋಗಲು ಯಾವುದೇ ಬಸ್ ವ್ಯವಸ್ಥೆ ಸಹ ಇಲ್ಲ ಹೀಗಾಗಿ ಕಚೇರಿ ಸ್ಥಳಾಂತರಿಸುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತನಿಖಾ ಆಯೋಗದ ಕಚೇರಿಯನ್ನು ಮೈಸೂರಿನಿಂದ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಿ, ದೂರು ನೀಡಲು ಹೆಚ್ಚುವರಿಯಾಗಿ ಇನ್ನೂ 15 ದಿ‌ನಗಳ ಕಾಲ ಸಮಯಾವಕಾಶ ಕೊಡಬೇಕೆಂದು ಒತ್ತಾಯಿಸಿದ್ದಾರೆ.‌ ಕೆಲ ದಿನಗಳ‌ ಹಿಂದೆ ಸಂತ್ರಸ್ತರ ಕುಟುಂಬಸ್ಥರು ಸಹ ಕಚೇರಿ ಸ್ಥಳಾಂತರವಾಗಬೇಕೆಂದು ಒತ್ತಾಯಿಸಿದ್ದರು.

ಓದಿ: ಸಿಡಿ ಕೇಸ್​ನಲ್ಲಿ ಸರ್ಕಾರದ ಅಸಹಕಾರ: ದಿಢೀರ್ ಮುಂಬೈಗೆ ಹಾರಿದ್ದೇಕೆ ರಮೇಶ್ ಜಾರಕಿಹೊಳಿ‌?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.