ಚಾಮರಾಜನಗರ: ಉದ್ಯೋಗ ನೇಮಕಾತಿಯಲ್ಲಿ ಲಂಚಾವತಾರದ ಆರೋಪ ಕೇಳಿಬಂದ ಬಳಿಕ ಚಾಮುಲ್ನಲ್ಲಿ ಪತ್ನಿ ಹೆಸರಲ್ಲಿ ಪತಿ ದರ್ಬಾರ್ ನಡೆಸಿರುವ ಆರೋಪ ಕೇಳಿಬಂದಿದೆ.
ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ 48ನೇ ಹಾಲು ಒಕ್ಕೂಟಗಳ ಸಮ್ಮೇಳನದಲ್ಲಿ ಚಾಮುಲ್ನ ನಿರ್ದೇಶಕಿ ಪ್ರಮೋದಾ ಅವರ ಬದಲಿಗೆ ಅವರ ಪತಿ ಶಂಕರಮೂರ್ತಿ ತೆರಳಿದ್ದಾರೆ ಎಂದು ಹೇಳಲಾಗ್ತಿದೆ.
ಚಾಮುಲ್ ಹಣದಲ್ಲೇ ಶಂಕರಮೂರ್ತಿ ಹೆಸರಲ್ಲೂ ಏರ್ ಟಿಕೆಟ್ ಬುಕ್ಕಾಗಿದ್ದು, ಚಾಮುಲ್ನ ಇನ್ನಿತರ ನಿರ್ದೇಶಕರ ಜೊತೆ ಶಂಕರಮೂರ್ತಿ ಪ್ರವಾಸಕ್ಕೆ ತೆರಳಿ ಸಮ್ಮೇಳನದಲ್ಲಿ ಭಾಗಿಯಾಗಿದ್ದು ಪತ್ನಿ ಹೆಸರಲ್ಲಿ ಪತಿ ಹೋಗಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.