ETV Bharat / state

ಹುಂಡಿ ಎಣಿಕೆ ವೇಳೆ ಹಣ ಕದ್ದ ಆರೋಪ: ಮಾದಪ್ಪನ ಬೆಟ್ಟದಲ್ಲಿ ವ್ಯಕ್ತಿ ಬಂಧನ

ದೇವಾಲಯದ ಹುಂಡಿ ಎಣಿಕೆಯ ವೇಳೆ ಹಣ ಕದ್ದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ.ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನೌಕರರು ಭಾಗವಹಿಸಿದ್ದು, ಇದರಲ್ಲಿ ಆರೋಪಿ ಪನೀರ್ ಸೆಲ್ವಂ ಕೂಡ ಇದ್ದನು.

author img

By

Published : Jul 14, 2022, 9:28 PM IST

ಹುಂಡಿ ಎಣಿಕೆ
ಹುಂಡಿ ಎಣಿಕೆ

ಚಾಮರಾಜನಗರ: ಹುಂಡಿ ಎಣಿಕೆಯ ವೇಳೆ ಹಣ ಕದ್ದ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. ಮಲೆ ಮಹದೇಶ್ವರ ಬೆಟ್ಟದ ನಿವಾಸಿಯಾದ ಪುದೂರು ಗ್ರಾಮದ ಪನೀರ್ ಸೆಲ್ವಂ ಬಂಧಿತ ಆರೋಪಿ. ಈತ ಪ್ರಾಧಿಕಾರದ ಡಿ ಗ್ರೂಪ್ ನೌಕರನೆಂದು ತಿಳಿದುಬಂದಿದೆ.

ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನೌಕರರು ಭಾಗವಹಿಸಿದ್ದು, ಇದರಲ್ಲಿ ಪನೀರ್ ಸೆಲ್ವಂ ಕೂಡ ಇದ್ದನು. ಎಣಿಕೆಯ ವೇಳೆ ಸಂಗ್ರಹವಾದ ಹಣವನ್ನು ಜೋಡಿಸಿ ಟೇಬಲ್‍ನಲ್ಲಿ ಇಡಲಾಗಿತ್ತು. ಆದರೆ ಎಣಿಕೆ ಕಾರ್ಯದಲ್ಲಿ ಪನೀರ್ ಸೆಲ್ವಂನ ವರ್ತನೆಯ ಮೇಲೆ ಅನುಮಾನ ವ್ಯಕ್ತವಾಯಿತು. ಈ ಬಗ್ಗೆ ಆತನನ್ನು ಪರಿಶೀಲಿಸಿದಾಗ ಜೇಬಿನಲ್ಲಿ 500ರೂ.ನ 80 ನೋಟುಗಳುಳ್ಳ 40 ಸಾವಿರ ರೂ. ಇತ್ತು.

ಹುಂಡಿ ಎಣಿಕೆ ವೇಳೆ ಹಣ ಕದ್ದ ಆರೋಪ
ಹುಂಡಿ ಎಣಿಕೆ ವೇಳೆ ಹಣ ಕದ್ದ ಆರೋಪ

ಈ ಬಗ್ಗೆ ಅಧಿಕಾರಿಗಳು ವಿಚಾರಿಸಿದಾಗ ಆತ ಎಟಿಎಂನಿಂದ 20 ಸಾವಿರ ರೂ. ಹಾಗೂ ಬೇರೆ ವ್ಯಕ್ತಿಯಿಂದ 20 ಸಾವಿರ ರೂ. ಪಡೆದಿರುವುದಾಗಿ ತಿಳಿಸಿದ್ದಾನೆ. ಆದರೆ, ಹುಂಡಿ ಎಣಿಕೆಯಲ್ಲಿ ಭಾಗವಹಿಸುವವರು ಹಣವನ್ನು ಹೊಂದುವಂತಿಲ್ಲ ಎಂಬ ನಿಯಮವಿದೆ. ಹಾಗಿದ್ದರೂ ಹಣವನ್ನು ಹೊಂದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದ್ದರಿಂದ ಪ್ರಾಧಿಕಾರದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಆತನನ್ನ ಬಂಧಿಸಲಾಗಿದೆ. ಈ ಸಂಬಂಧ ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಾಮರಾಜನಗರ: ಕರ್ತವ್ಯ ನಿರ್ವಹಣೆಯಲ್ಲಿ ವಿಫಲ; ಹುದ್ದೆಯಿಂದ ನಗರಸಭೆ ಆಯುಕ್ತ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.