ಚಾಮರಾಜನಗರ: ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಹಿಂದೆ ಕಾರ್ಯಕರ್ತರು, ಮುಖಂಡರ ದಂಡೇ ಹರಿದುಬಂದು ಸಾಮಾಜಿಕ ಅಂತರವನ್ನು ಉಲ್ಲಂಘನೆ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳ ಮಾಹಿತಿ ಹಾಗೂ ರೈತ ಮುಖಂಡರ ಸಭೆ ನಡೆಸಲು ಸಚಿವ ಬಿ.ಸಿ.ಪಿ ಚಾಮರಾಜನಗರಕ್ಕೆ ಆಗಮಿಸಿದ್ದ ವೇಳೆ ಅವರನ್ನು ಸ್ವಾಗತಿಸಲು 50 ಕ್ಕೂ ಹೆಚ್ಚು ಕಾರ್ಯಕರ್ತರು, ಮುಖಂಡರು ಸಾಮಾಜಿಕ ಅಂತರ ಮರೆತು ಮುಗಿಬಿದ್ದರು.
ಇನ್ನು, ಅಧಿಕಾರಿಗಳು, ರೈತ ಮುಖಂಡರ ಸಭೆಯಲ್ಲೂ ಕೃಷಿ ಸಚಿವರು ಮಾಸ್ಕ್ ಧರಿಸಿದ್ದರೇ ಹೊರತು ಜನರಿಂದ ಯಾವುದೇ ಅಂತರವನ್ನು ಕಾಪಾಡಿಕೊಂಡಿರಲಿಲ್ಲ. ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಾದ ಸಚಿವರೇ ನಿಯಮ ಗಾಳಿಗೆ ತೂರಿದರೆ ಹೇಗೆ?