ETV Bharat / state

ಕೊಳ್ಳೇಗಾಲ: ಹಲವೆಡೆ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿ ಬಂಧನ - kollegala news

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರದ ಹಲವೆಡೆ ಬೈಕ್​, ಚಿನ್ನಾಭರಣ, ನಗದು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನ ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ.

A theft arrested in kollegal
ಕೊಳ್ಳೇಗಾಲ: ಹಲವೆಡೆ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿ ಬಂಧನ
author img

By

Published : Jun 20, 2020, 8:14 PM IST

ಕೊಳ್ಳೇಗಾಲ (ಚಾಮರಾಜನಗರ): ನಗರದ ಹಲವೆಡೆ ಕಳ್ಳತನ ಮಾಡಿ ಪರಾರಿಯಾಗಿದ್ದ ಖದೀಮನನ್ನ ಬಂಧಿಸುವಲ್ಲಿ ಕೊಳ್ಳೇಗಾಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಟ್ಟಣದ ದಕ್ಷಿಣ ಬಡಾವಣೆಯ ನಿವಾಸಿ ಭಾಸ್ಕರ್(25) ಬಂಧಿತ ಆರೋಪಿ. ಈತ ಕಳೆದ ಎರಡು ತಿಂಗಳು ಹಿಂದೆ ದೇವಾಂಗ ಪೇಟೆಯ ತಿರುವಣ್ಣಾ ಬೀದಿಯಲ್ಲಿ ಪ್ಯಾಷನ್ ಬೈಕ್ ಕಳ್ಳತನ ಮಾಡಿದ್ದ. ಅಲ್ಲದೇ, ಇಂದೇ ತಿಂಗಳು ನಾಯಕರ ಬೀದಿಯ ಎರಡು ಮನೆಗಳ ಬೀಗ ಮುರಿದು 9 ಸಾವಿರ ನಗದು, ಒಂದು ಜೊತೆ ಓಲೆ, ಜುಮುಕಿ, ಉಂಗುರ ಕಳ್ಳತನ ಮಾಡಿ ಪರಾರಿಯಾಗಿದ್ದ.

ಈ‌ ಕುರಿತು ಕೊಳ್ಳೇಗಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ಕೈಗೊಂಡ ಪೊಲೀಸರು, ಇಂದು ನಗರದ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಕಳ್ಳತನವಾದ ಬೈಕ್, ಚಿನ್ನಾಭರಣ ಹಾಗೂ 2,500 ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.