ETV Bharat / state

ಅಪರಿಚಿತನಿಗೆ ಹಣ ತೆಗೆದುಕೊಡುವಂತೆ ಎಟಿಎಂ‌ ನೀಡಿ 19 ಸಾವಿರ ಕಳೆದುಕೊಂಡ ವ್ಯಕ್ತಿ - A stranger did fraudulently to a person near atm

ಕೊಳ್ಳೇಗಾಲದಲ್ಲಿ ವ್ಯಕ್ತಿಯೋರ್ವ ಅಪರಿಚಿತ ವ್ಯಕ್ತಿಯಲ್ಲಿ ಎಟಿಎಂ ಕಾರ್ಡ್​ ನೀಡಿ 500 ರೂ. ತೆಗೆದುಕೊಡುವಂತೆ ಹೇಳಿ 19 ಸಾವಿರ ರೂ ಕಳೆದುಕೊಂಡ ಘಟನೆ ಪಟ್ಟಣದ ಕೆನರಾ ಬ್ಯಾಂಕ್ ಎಟಿಎಂನಲ್ಲಿ ನಡೆದಿದೆ.

a-stranger-did-fraudulently-to-a-person-near-atm
ಅಪರಿಚಿತನಿಗೆ ಹಣ ತೆಗೆದುಕೊಡುವಂತೆ ಎಟಿಎಂ‌ ನೀಡಿ 19 ಸಾವಿರ ಕಳೆದುಕೊಂಡ ವ್ಯಕ್ತಿ
author img

By

Published : Mar 24, 2022, 11:02 PM IST

ಕೊಳ್ಳೇಗಾಲ:‌ ಪಟ್ಟಣದಲ್ಲಿ ವ್ಯಕ್ತಿಯೋರ್ವ ಅಪರಿಚಿತನೊಬ್ಬನಿಗೆ ಎಟಿಎಂ ನೀಡಿ ಹಣ ಕಳೆದುಕೊಂಡಿರುವ ಘಟನೆ ಕೊಳ್ಳೇಗಾಲ ಪಟ್ಟಣದ ಕೆನರಾ ಬ್ಯಾಂಕ್ ಎಟಿಎಂನಲ್ಲಿ ನಡೆದಿದೆ. ಇಲ್ಲಿನ ಜಾಗೇರಿ ಗ್ರಾಮದ ಶೇಶುರಾಜ್ ಹಣ ಕಳೆದುಕೊಂಡ ವ್ಯಕ್ತಿ ಎಂದು ತಿಳಿದುಬಂದಿದೆ. 19 ಸಾವಿರ ರೂ. ಕಳೆದುಕೊಂಡಿರುವುದಾಗಿ ಹೇಳಲಾಗಿದೆ.

ಈತ ಎಟಿಎಂನಲ್ಲಿ ಹಣ ತೆಗೆದುಕೊಳ್ಳಲು ತೆರಳಿದ್ದ ವೇಳೆ ಅಪರಿಚಿತನೋರ್ವನ ಬಳಿ‌ ತನಗೂ 500 ರೂ. ಹಣ ತೆಗೆದುಕೊಡುವಂತೆ ಹೇಳಿ ತನ್ನ ಎಟಿಎಂ ನೀಡಿದ್ದಾನೆ. ಬಳಿಕ 500 ರೂ. ತೆಗೆದುಕೊಟ್ಟಿದ್ದು ಆ ವೇಳೆ ಕಾರ್ಡ್ ನ್ನು ಅಪರಿಚಿತ ಬದಲಿಸಿದ್ದಾನೆ ಎನ್ನಲಾಗಿದೆ. ಶೇಶುರಾಜ್ ಮನೆಗೆ ಬಂದ ವೇಳೆ 19 ಸಾವಿರ ರೂ. ಹಣ ಡ್ರಾ ಆದ ಮೆಸೇಜ್ ಬಂದಾಗ ಮೋಸ ಹೋಗಿರುವುದು ಗೊತ್ತಾಗಿದೆ. ‌ಸದ್ಯ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣದ ತನಖೆ ನಡೆಯುತ್ತಿದೆ.

ಓದಿ : ಬಿಬಿಎಂಪಿ ಯನ್ನು ‘ಬೃಹತ್ ಬಿಜೆಪಿ ಮಹಾನಗರ ಪಾಲಿಕೆ’ ಎಂದು ಕರೆಯಿರಿ: ಶಾಸಕಿ ಸೌಮ್ಯ ರೆಡ್ಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.