ETV Bharat / state

ಈಜಲು ತೆರಳಿದ ವಧುವಿನ ತಮ್ಮ ಸಾವು.. ವಿವಾಹ ಸಡಗರದಲ್ಲಿದ್ದ ಮನೆಯಲ್ಲೀಗ ಸೂತಕ - chamarajanagar news

ದಸರಾ ರಜೆ ಹಾಗೂ ಅಕ್ಕನ ಮದುವೆ ಹಿನ್ನೆಲೆ ಗ್ರಾಮಕ್ಕೆ ತೆರಳಿದ್ದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಕೆರೆಯಲ್ಲಿ ಈಜು ಬಾರದೆ ಸಾವಿಗೀಡಾಗಿದ್ದಾನೆ. ಇನ್ನು ಕೆಲವು ದಿನಗಳಲ್ಲಿ ಈತನ ಅಕ್ಕನ ಮದುವೆ ನಡೆಯುತ್ತಿತ್ತು.

A SSLC student died while swimming in chamarajanagar
ವಿವಾಹ ಸಡಗರದಲ್ಲಿದ್ದ ಮನೆಯಲ್ಲೀಗ ಸೂತಕದ ಛಾಯೆ
author img

By

Published : Oct 17, 2021, 7:19 PM IST

ಚಾಮರಾಜನಗರ: ದಸರಾ ರಜೆ ಕಳೆಯಲು ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ತೆರಳಿದ್ದ SSLC ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ.

ಭೀಮನಬೀಡು ಗ್ರಾಮದ ಕಿರಣ್ ಕುಮಾರ್(15) ಮೃತ ವಿದ್ಯಾರ್ಥಿ. ಈತ ಮೈಸೂರಿನಲ್ಲಿ SSLC ವ್ಯಾಸಂಗ ಮಾಡುತ್ತಿದ್ದ. ದಸರಾ ರಜೆ ಹಿನ್ನೆಲೆ ಹಾಗೂ ತನ್ನ ಅಕ್ಕನ ಮದುವೆ ಹಿನ್ನೆಲೆ ಗ್ರಾಮಕ್ಕೆ ಬಂದಿದ್ದ. ಈ ವೇಳೆ ಸ್ನೇಹಿತರ ಜೊತೆ ಇಂದು ಕೆರೆಗೆ ಇಳಿದಿದ್ದಾನೆ. ಆದರೆ, ಕೆರೆ ಆಳಕ್ಕೆ ಧುಮುಕಿದ್ದರಿಂದ ಈಜುಬಾರದೆ ಅಸುನೀಗಿದ್ದಾನೆ ಎಂದು ಸ್ನೇಹಿತರು ತಿಳಿಸಿದ್ದಾರೆ.

ಕೆಲವೇ ದಿನಗಳಲ್ಲಿ ನಡೆಯಲಿದ್ದ ಮದುವೆ ಸಂಭ್ರಮದ ಸಂದರ್ಭದಲ್ಲಿ ದುಃಖ ಮನೆ ಮಾಡಿದೆ. ಗುಂಡ್ಲುಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.