ಚಾಮರಾಜನಗರ : ಜಿಲ್ಲೆಯಲ್ಲಿಂದು 94 ಕೊರೊನಾ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 5245ಕ್ಕೆ ಏರಿಕೆಯಾಗಿದೆ.
ಇಂದು 73 ಮಂದಿ ಕೊರೊನಾದಿಂದ ಗುಣಮುಖರಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 772 ಇದೆ. 43 ಮಂದಿ ಸೋಂಕಿತರು ಐಸಿಯುನಲ್ಲಿದ್ದು 200 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ. 1128 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಮೃತರ ವಿವರ:
ಮಹಾಮಾರಿ ಸೋಂಕಿನಿಂದ ಇಂದು ಇಬ್ಬರು ಅಸುನೀಗಿದ್ದಾರೆ. ಕಳೆದ 4 ರಂದು ದಾಖಲಾಗಿದ್ದ ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ 68 ವರ್ಷದ ವೃದ್ಧ ಹಾಗೂ ಕಳೆದ 9 ರಂದು ದಾಖಲಾಗಿದ್ದ ಚಾಮರಾಜನಗರ ತಾಲೂಕಿನ ಬಲಚವಾಡಿ ಗ್ರಾಮದ 80 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಮೃತರ ಅಂತ್ಯಸಂಸ್ಕಾರವನ್ನು ಕೋವಿಡ್ ನಿಯಮಾನುಸಾರ ಸ್ವಯಂಸೇವಕರು ನೆರವೇರಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು 203 ಕೊರೊನಾ
ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಇಂದು 203 ಸೊಂಕಿತರು ಧೃಡಪಟ್ಟಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದು ಒಟ್ಟು ಮೃತರ ಸಂಖ್ಯೆ 100 ಕ್ಕೆ ಏರಿದೆ.
ಚಿಕ್ಕಬಳ್ಳಾಪುರ 68,ಬಾಗೇಪಲ್ಲಿ 73, ಚಿಂತಾಮಣಿ 13, ಗೌರಿಬಿದನೂರು 18, ಗುಡಿಬಂಡೆ 3 ಮತ್ತು ಶಿಡ್ಲಘಟ್ಟ 28 ಪ್ರಕರಣಗಳು ಧೃಡಪಟ್ಟಿದ್ದು ಒಟ್ಟು ಸೊಂಕಿತರ ಸಂಖ್ಯೆ 9397 ಕ್ಕೆ ಏರಿಕೆಯಾಗಿದೆ.
ಇನ್ನೂ ಚಿಕ್ಕಬಳ್ಳಾಪುರದ 90 ವರ್ಷದ ವೃದ್ದ ಮತ್ತು ಶಿಢ್ಲಘಟ್ಟದ 61 ವರ್ಷದ ವೃದ್ದೆ ಕೊರೊನಾಗೆ ಬಲಿಯಾಗಿದ್ದು ಜಿಲ್ಲೆಯಲ್ಲಿ ಮೃತರ ಸಂಖ್ಯೆ 100 ಕ್ಕೇರಿದೆ.
ಒಟ್ಟು 8150 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು 1147 ಸಕ್ರೀಯ ಸೊಂಕಿತರು ಜಿಲ್ಲೆಯ ಕೋವೀಡ್ ಕೇರ್ ಸೆಂಟರ್ ಸೇರಿದಂತೆ ಕೊವೀಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.