ಚಾಮರಾಜನಗರ: ಜಿಲ್ಲೆಯಲ್ಲಿಂದು 73 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 4,548ಕ್ಕೆ ಏರಿಕೆಯಾಗಿದೆ.
ಇಂದು ಬರೋಬ್ಬರಿ 131 ಜನರು ಗುಣಮುಖರಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 800ಕ್ಕಿಳಿದಿದೆ. 38 ಮಂದಿ ಸೋಂಕಿತರು ಐಸಿಯುನಲ್ಲಿದ್ದು, 312 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. 1,095 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಇಂದು ಗುಣಮುಖರಾದವಲ್ಲಿ 60 ವರ್ಷ ಮೇಲ್ಪಟ್ಟ 22 ಮಂದಿ ಇದ್ದಾರೆ. ಜಿಲ್ಲೆಯ ಪರೀಕ್ಷೆಗಳ ಸಂಖ್ಯೆ 68 ಸಾವಿರ ದಾಟಿದ್ದು, ಒಟ್ಟು ಮೃತರ ಸಂಖ್ಯೆ 99ಕ್ಕೆ ಏರಿದೆ.