ETV Bharat / state

ರಾಜ್ಯದಲ್ಲಿವೆ 6,500 ಆನೆಗಳು, ಹುಲಿ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1 ಸಾಧ್ಯತೆ: ಸಚಿವ ಕತ್ತಿ

author img

By

Published : Apr 7, 2022, 4:51 PM IST

ಹುಲಿಗಳ ಸಂಖ್ಯೆಯಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಈ ಬಾರಿ ಮೊದಲ ಸ್ಥಾನ ಪಡೆಯಬಹುದು. ರಾಜ್ಯದ ವಿವಿಧ ಅರಣ್ಯಪ್ರದೇಶದಲ್ಲಿ ಒಟ್ಟು 6,500 ಆನೆಗಳಿದ್ದು, ಚಿರತೆಗಳ ಸಂಖ್ಯೆ 400 ಇದೆ ಎಂದು ಅರಣ್ಯ ಹಾಗೂ ಆಹಾರ ಇಲಾಖೆಯ ಸಚಿವ ಉಮೇಶ್ ಕತ್ತಿ ಮಾಹಿತಿ ನೀಡಿದರು.

Minister Umesh Katti
ಸಚಿವ ಉಮೇಶ್ ಕತ್ತಿ

ಚಾಮರಾಜನಗರ: ಈ ವರ್ಷದ ಹುಲಿ ಗಣತಿಯಲ್ಲಿ ರಾಜ್ಯದಲ್ಲಿ 563 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಹುಲಿಗಳ ಸಂಖ್ಯೆಯಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ. ಬಹಳ ಸಣ್ಣ ಅಂತರದಲ್ಲಿದ್ದು, ನಾವೇ ನಂ 1 ಆಗಬಹುದು ಎಂದು ಅರಣ್ಯ ಹಾಗೂ ಆಹಾರ ಇಲಾಖೆಯ ಸಚಿವ ಉಮೇಶ್ ಕತ್ತಿ ಹೇಳಿದರು.

ರಾಜ್ಯದಲ್ಲಿವೆ ಒಟ್ಟು 6,500 ಆನೆಗಳು: ಬಂಡೀಪುರದಲ್ಲಿ ವನ್ಯಜೀವಿ ಸಫಾರಿ ನಡೆಸಿ, ಕಾಮಗಾರಿಗಳನ್ನು ಪರೀಕ್ಷಿಸಿದ ಬಳಿಕ ಅವರು ಮಾತನಾಡಿ, ಹುಲಿಗಳ ಸಂಖ್ಯೆಯಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಈ ಬಾರಿ ಮೊದಲ ಸ್ಥಾನ ಪಡೆಯಬಹುದು. ರಾಜ್ಯದ ವಿವಿಧ ಅರಣ್ಯಪ್ರದೇಶದಲ್ಲಿ ಒಟ್ಟು 6,500 ಆನೆಗಳಿದ್ದು, ಚಿರತೆಗಳ ಸಂಖ್ಯೆ 400 ಇದೆ. ಪ್ರಾಣಿ ಮತ್ತು ಮಾನವ ಸಂಘರ್ಷ ತಡೆಗೆ ಸಾಕಷ್ಟು ಪ್ರಯತ್ನಿಸುತ್ತಿದ್ದು ರೈಲ್ವೆ ಕಂಬಿಗಳ ಕೊರತೆ ಉಂಟಾಗಿದ್ದು, ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ, ರೈಲ್ವೆ ಕಂಬಿ ಕೊರತೆ ಇರುವುದರಿಂದ ಸೋಲಾರ್ ರೋಪ್​ನನ್ನು ಬಳಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ, ಮಲೆಮಹದೇಶ್ವರ ವನ್ಯಜೀವಿಧಾಮ ಹುಲಿ ಸಂರಕ್ಷಿತ ಪ್ರದೇಶ ಆಗಲಿದೆಯಾ ಎಂವ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಈಗಾಗಲೇ ಆ ಪ್ರದೇಶ ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸಲಾಗಿದೆ. ಸಾಧಕ-ಬಾಧಕ ಚರ್ಚಿಸಿ ಶೀಘ್ರವೇ ಟೈಗರ್ ಜೋನ್ ಎಂದು ಘೋಷಿಸಲಾಗುವುದು ಎಂದರು.

ಇದನ್ನೂ ಓದಿ: ಹಿರಿಯರಿಗೆ ಕೊಕ್ ಕೊಟ್ಟರೂ ಓಕೆ, ವಿಜಯೇಂದ್ರಗೆ ಸಚಿವ ಸ್ಥಾನ ನೀಡಿದ್ರು ಸಂತೋಷ: ಉಮೇಶ್ ಕತ್ತಿ

13 ಲಕ್ಷ ಅಕ್ರಮ ಪಡಿತರ ಚೀಟಿ ರದ್ದು: ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದ, 13 ಲಕ್ಷ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗಿದೆ. 13 ಲಕ್ಷ ಪಡಿತರ ಚೀಟಿದಾರದಲ್ಲಿ 24 ಸಾವಿರ ಮಂದಿ ಸರ್ಕಾರಿ ನೌಕರರೇ ಇದ್ದು, ಅವರಿಗೆಲ್ಲಾ ನೋಟಿಸ್ ಜಾರಿಗೊಳಿಸಿ ದಂಡ ಕಟ್ಟಲು ಸೂಚನೆ ಕೊಡಲಾಗಿದೆ ಎಂದು ಮಾಹಿತಿ ನೀಡಿದರು. ಆಹಾರ ಭದ್ರತೆಯಡಿ ಇನ್ನೂ 6 ತಿಂಗಳು ಕೇಂದ್ರ ಸರ್ಕಾರವು 5 ಕೆಜಿ ಉಚಿತ ಅಕ್ಕಿ ಕೊಡಲಿದೆ. ಯಾರೂ ಕೂಡ ಅಕ್ಕಿಯನ್ಬು ಮಾರಿಕೊಳ್ಳದೇ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಇದೇ ವೇಳೆ ಮನವಿ ಮಾಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.