ETV Bharat / state

ಸಾರಿಗೆ ನೌಕರರ ಮುಷ್ಕರ: ಕೆಎಸ್​ಆರ್​ಟಿಸಿ ಚಾಮರಾಜನಗರ ವಿಭಾಗಕ್ಕೆ 50 ಲಕ್ಷ ರೂ. ನಷ್ಟ

author img

By

Published : Apr 7, 2021, 5:52 PM IST

ಸಾರಿಗೆ ನೌಕರರ ಮುಷ್ಕರಿಂದ ಕೆಎಸ್​ಆರ್​ಟಿಸಿ ಚಾಮರಾಜನಗರ ವಿಭಾಗಕ್ಕೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಸಾರ್ವಜನಿಕರೂ ಕೂಡ ಸಮಸ್ಯೆ ಎದುರಿಸುವಂತಾಯಿತು.

loss to KSRTC due to workers protes
ಸಾರಿಗೆ ನೌಕರರ ಮುಷ್ಕರ

ಚಾಮರಾಜನಗರ : ಸಾರಿಗೆ ನೌಕರರು ವೇತ ಹೆಚ್ಚಳಕ್ಕಾಗಿ ಮುಷ್ಕರ ನಡೆಸುತ್ತಿರುವುದರಿಂದ ಚಾಮರಾಜನಗರ ಉಪವಿಭಾಗಕ್ಕೆ 50 ಲಕ್ಷ ರೂ. ನಷ್ಟವಾಗಿದೆ.

ಈ ಕುರಿತು ಮಾಹಿತಿ ನೀಡಿದ ಕೆಎಸ್​ಆರ್​ಟಿಸಿ ಚಾಮರಾಜನಗರ ಉಪವಿಭಾಗ ನಿಯಂತ್ರಣಾಧಿಕಾರಿ ಶ್ರೀನಿವಾಸ್, ಇಂದು ಬಸ್​ಗಳು ರಸ್ತೆಗಳಿಯದ ಕಾರಣ 50 ಲಕ್ಷ ರೂ. ನಷ್ಟವಾಗಿದೆ. ಕೆಲ ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಬರ್ತೀವಿ, ಬರ್ತೀವಿ ಎನ್ನುತ್ತಿದ್ದಾರೆ, ಆದರೆ, ಬಂದಿಲ್ಲ ಎಂದರು.

ಕೆಎಸ್​ಆರ್​ಟಿಸಿ ಚಾಮರಾಜನಗರ ವಿಭಾಗಕ್ಕೆ ನಷ್ಟ

ನಿರೀಕ್ಷಕರು, ಟಿಸಿಗಳು, ಚಾಲಕರು, ನಿರ್ವಾಹಕರ ಮನವೊಲಿಸಲು ಪ್ರಯತ್ನಿಸಿದರೂ ಫಲಪ್ರದವಾಗಿಲ್ಲ. ಮೆಕ್ಯಾನಿಕ್ ವಿಭಾಗದ ಸಿಬ್ಬಂದಿ ಕೂಡ ಇಂದು ಕೆಲಸಕ್ಕೆ ಹಾಜರಾಗಿಲ್ಲ. ಖಾಸಗಿ ಬಸ್​ಗಳು ಬಸ್ ನಿಲ್ದಾಣದ ಮೂಲಕ ಸಂಚರಿಸಲು ಅವಕಾಶ ಕೊಟ್ಟಿರುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗಿಲ್ಲ ಎಂದು ತಿಳಿಸಿದರು.

182 ಖಾಸಗಿ ಬಸ್ ಸಂಚಾರ : ಚಾಮರಾಜನಗರದಿಂದ ಗುಂಡ್ಲುಪೇಟೆ, ಕೊಳ್ಳೇಗಾಲ, ಮೈಸೂರಿಗೆ 182 ಖಾಸಗಿ ಬಸ್​ಗಳು ಸಂಚರಿಸುತ್ತಿವೆ. ಪ್ರಯಾಣಿಕರಿಗಾಗಿ ತಾಸುಗಟ್ಟಲೇ ಕಾಯುತ್ತಿದ್ದ ಖಾಸಗಿ ಬಸ್​ಗಳು ಇಂದು ಕೆಲವೇ ನಿಮಿಷಗಳಲ್ಲಿ ಭರ್ತಿಯಾಗುತ್ತಿದ್ದ ದೃಶ್ಯ ಕಂಡು ಬಂತು. ಇದರಿಂದ ಖಾಸಗಿ ಬಸ್​ನವರಿಗೆ ಭಾರೀ ಲಾಭವಾಗಿದೆ.

ಹಣ ಕೊಟ್ಟು ಬಂದ ವಿದ್ಯಾರ್ಥಿಗಳು : ವಿದ್ಯಾರ್ಥಿ ಪಾಸ್ ಇದ್ದ ವಿದ್ಯಾರ್ಥಿಗಳನ್ನು ಖಾಸಗಿ ಬಸ್​ನವರು ಉಚಿತವಾಗಿ ಕರೆದೊಯ್ಯಬೇಕೆಂದು ಡಿಸಿ ಸೂಚಿಸಿದ್ದರೂ ಪಾಲನೆಯಾಗಿಲ್ಲ. ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ವಿದ್ಯಾರ್ಥಿಗಳು ಹಣ ಕೊಟ್ಟು ಬಂದಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ಜೀಪ್​ನಲ್ಲಿ ಡ್ರಾಪ್ ಕೊಟ್ಟ ಪಿಎಸ್​ಐ : ಹನೂರು ತಾಲೂಕಿನ ಅಜ್ಜೀಪುರದ ಬಳಿ ಶಾಲಾ ಕಾಲೇಜಿಗೆ ತೆರಳಲು ಬಸ್​ಗಾಗಿ ಪರಿತಪಿಸುತ್ತಿದ್ದ ವಿದ್ಯಾರ್ಥಿಗಳನ್ನು ಕಂಡ ರಾಮಾಪುರ ಪಿಎಸ್ಐ, ವಿದ್ಯಾರ್ಥಿಗಳಿಗೆ ಡ್ರಾಪ್ ಕೊಟ್ಟು ಸಹಕರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.