ETV Bharat / state

ರಾತ್ರೋರಾತ್ರಿ 50 ಲಕ್ಷ ರೂ. ಮೌಲ್ಯದ ಪಾನ್​ ಮಸಾಲ ಕಳ್ಳತನ: 12 ತಾಸಿನಲ್ಲೇ ಕಳ್ಳನ ಬಂಧನ - 50 lack theft case

ಪಾನ್ ಮಸಾಲ ಗೋದಾಮಿನಲ್ಲಿ ಕಳ್ಳತನ ಮಾಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

Chamarajanagara
Chamarajanagara
author img

By

Published : Nov 23, 2020, 7:26 PM IST

ಚಾಮರಾಜನಗರ: ಬರೋಬ್ಬರಿ 50 ಲಕ್ಷ ರೂ. ಮೌಲ್ಯದ ಪಾನ್ ಮಸಾಲ ದೋಚಿದ್ದ ತಮಿಳುನಾಡಿನ ಕಳ್ಳನನ್ನು 12 ತಾಸಿನಲ್ಲೇ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಕೋಳಿಪಾಳ್ಯ ಗ್ರಾಮದಲ್ಲಿ 23ರಂದು ಜೆ.ಬವರ್ ಲಾಲ್ ಎಂಬುವವರ ಪಾನ್ ಮಸಾಲ ಗೋದಾಮಿನ ಬೀಗ ಮುರಿದ ತಮಿಳುನಾಡು ಮೂಲದ ಕಳ್ಳರು ಪಾನ್ ಮಸಾಲವನ್ನು 3 ವಾಹನಗಳಲ್ಲಿ ಹೊತ್ತೊಯ್ದಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, 12 ತಾಸಿನಲ್ಲೇ ಕಳ್ಳನೊಬ್ಬನ ಹೆಡೆಮುರಿ ಕಟ್ಟಿದ್ದಾರೆ.

ಸದ್ಯ ಧರ್ಮಪುರಿ ತಾಲೂಕಿನ ಅಬುತಲ್ಲಾ ಎಂಬಾತನನ್ನು ಬಂಧಿಸಿ ಮಾಲು ಸಮೇತ ಮೂರು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ತಲೆಮರೆಸಿಕೊಂಡ 10ಕ್ಕೂ ಹೆಚ್ಚು ಮಂದಿಯ ಪತ್ತೆಗೆ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.