ಕೊಳ್ಳೇಗಾಲ (ಚಾಮರಾಜನಗರ): ದುಷ್ಕರ್ಮಿಗಳು ಮನೆಯೊಂದರ ಹಿಂಬಾಗಿಲನ್ನು ಹೊಡೆದು ಮನೆಯೊಳಗಿದ್ದ 42 ಗ್ರಾಂ ಚಿನ್ನಾಭರಣ ಕಳವು ಮಾಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಗ್ರಹಾರ ಬಡಾವಣೆಯ ಮಹದೇವಸ್ವಾಮಿ ಎಂಬುವರ ಮನೆಯಲ್ಲಿ ಈ ಕಳ್ಳತನವಾಗಿದೆ.
ಏ.13ರಂದು ಸಂಜೆ ಕಾರ್ಯನಿಮಿತ್ತ ಮಹದೇವಸ್ವಾಮಿ ಕುಟುಂಬ ಮಂಡ್ಯ ಜಿಲ್ಲೆಯ ಮದ್ದೂರಿಗೆ ತೆರಳಿತ್ತು. ಮರು ದಿನ ಮನೆಗೆ ಹಿಂದಿರುಗಿದಾಗ ಮನೆಯ ಹಿಂಬಾಗಿಲು ಮುರಿದು ಬೀರುವಿನಲ್ಲಿದ್ದ ಸುಮಾರು 42 ಗ್ರಾಂ ಚಿನ್ನಾಭರಣವನ್ನು ದುಷ್ಕರ್ಮಿಗಳು ಕದ್ದೊಯ್ದಿರುವುದು ತಿಳಿದು ಬಂದಿದೆ.
ಈ ಬಗ್ಗೆ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಮಹದೇಸ್ವಾಮಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಡಿವೈಎಸ್ಪಿ ನಾಗರಾಜು, ವೃತ್ತ ನಿರೀಕ್ಷಕ ಶಿವರಾಜ್ ಆರ್.ಮುಧೋಳ್, ಅಪರಾಧ ವಿಭಾಗದ ಪಿಎಸ್ಐ ವೀರಣ್ಣಾರಾಧ್ಯ, ಮಂಜುನಾಥ್ ಹಾಗೂ ಸಿಬ್ಬಂದಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡದ ಸಮೇತ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.
ಇದನ್ನೂ ಓದಿ: ಇನ್ಸ್ಟಾಗ್ರಾಮ್ನಲ್ಲಿ ಬ್ಲ್ಯಾಕ್‌ಮೇಲ್ ಮಾಡಿ ಯುವತಿಯ ಸಾವಿಗೆ ಕಾರಣನಾದವ ಅರೆಸ್ಟ್!