ETV Bharat / state

ಗ್ರಾ.ಪಂ ಚುನಾವಣೆ: ಚಾಮರಾಜನಗರದಲ್ಲಿ 32 ನಾಮಪತ್ರ ತಿರಸ್ಕೃತ, ಮೂವರು ಅವಿರೋಧ ಆಯ್ಕೆ - Chamarajanagar gram panchayath latest news

ಚಾಮರಾಜನಗರ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್​ ಚುನಾವಣೆಗೆ ಮೊದಲ ಹಂತದಲ್ಲಿ ಸುಮಾರು 3,552 ನಾಮಪತ್ರ ಸ್ವೀಕೃತವಾಗಿದ್ದು, 32 ನಾಮಪತ್ರಗಳು ತಿರಸ್ಕೃತಗೊಂಡಿವೆ.

ಚಾಮರಾಜನಗರದಲ್ಲಿ ಮೂವರು ಅವಿರೋಧ ಆಯ್ಕೆ
32 nominations rejected in Chamarajanagar
author img

By

Published : Dec 13, 2020, 12:20 PM IST

ಚಾಮರಾಜನಗರ : ಪ್ರತಿಷ್ಠೆ, ವೈರತ್ವ, ಪಕ್ಷಗಳ ಜಂಗಿಕುಸ್ತಿಯ ಗ್ರಾಮ ಪಂಚಾಯತ್​ ಚುನಾವಣೆಯ ಮೊದಲ ಹಂತದಲ್ಲಿ 3,552 ನಾಮಪತ್ರ ಸ್ವೀಕೃತವಾಗಿದ್ದು, 32 ನಾಮಪತ್ರಗಳು ತಿರಸ್ಕೃತಗೊಂಡಿವೆ.

ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಚಾಮರಾಜನಗರ ತಾಲೂಕಿನಲ್ಲಿ 43 ಗ್ರಾಮ ಪಂಚಾಯತ್​ಗಳ 2267ನಾಮಪತ್ರಗಳಲ್ಲಿ 18 ನಾಮಪತ್ರಗಳು ಹಾಗೂ ಗುಂಡ್ಲುಪೇಟೆ ತಾಲೂಕಿನ 34 ಗ್ರಾಮ ಪಂಚಾಯತ್​ಗಳ 1,438 ನಾಮಪತ್ರಗಳಲ್ಲಿ 14 ನಾಮಪತ್ರಗಳು ತಿರಸ್ಕೃತವಾಗಿವೆ.

ಓದಿ : ಸೆಂಚುರಿ ಬಾರಿಸಿದ ಕೊಳ್ಳೇಗಾಲದ 'ಸುಬ್ಬು ಹೋಟೆಲ್ ': 100 ವರ್ಷವಾದರೂ ಮಾಸದ ರುಚಿ..!

ಮೂವರು ಅವಿರೋಧ ಆಯ್ಕೆ:

ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾ.ಪಂ. ವ್ಯಾಪ್ತಿಯ ನಾಗವಳ್ಳಿ ಗ್ರಾಮದ ಐದನೇ ವಾರ್ಡ್‌ನ ನಯನ ತಾರಾ ಎಂಬುವರ ನಾಮಪತ್ರ ತಿರಸ್ಕೃತಗೊಂಡ ಪರಿಣಾಮ ಶಾಂತಕುಮಾರಿ ಅವರು ಅವಿರೋಧ ಆಯ್ಕೆಯಾಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬರಗಿ ಕಾಲೋನಿಯ ಚಿನ್ನರಾಜು, ಮೂಖಹಳ್ಳಿ ಕಾಲೋನಿಯ ಮಹಾದೇವಮ್ಮ ಗ್ರಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.