ಚಾಮರಾಜನಗರ: ಮಾನಸಿಕ ಖಿನ್ನತೆ, ಕೌಟಂಬಿಕ ಕಲಹ, ಸಾಲಬಾಧೆ ಸೇರಿದಂತೆ ಹಲವು ಕಾರಣಗಳಿಂದ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ 309 ಮಂದಿ ಆತ್ಮಹತ್ಯೆ(chamarajanagar suicide cases) ಮಾಡಿಕೊಂಡಿರುವ ಮಾಹಿತಿ ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಚಾಮರಾಜನಗರ ಪೊಲೀಸ್ ಠಾಣೆಗಳಲ್ಲಿ(chamarajanagar police stations) ದಾಖಲಾಗಿರುವ FIR ಪ್ರಕಾರ 2019ರಲ್ಲಿ 91 ಮಂದಿ ಆತ್ಮಹತ್ಯೆ(suicide) ಮಾಡಿಕೊಂಡಿದ್ದರು. ಈ ಸಂಖ್ಯೆ 2020ರಲ್ಲಿ ಹೆಚ್ಚಾಯಿತು. ಕೋವಿಡ್, ಲಾಕ್‌ಡೌನ್ ವೇಳೆ ವ್ಯಾಪಾರ - ವಹಿವಾಟು ತಲೆಕೆಳಗಾಗಿದ್ದ 2020ರಲ್ಲಿ 119 ಮಂದಿ ಪ್ರಾಣ ಕಳೆದುಕೊಂಡಿದ್ದರೆ, 2021ರ ಅಕ್ಟೋಬರ್ ಅಂತ್ಯದವರೆಗೆ 99 ಮಂದಿ ಆತ್ಮಹತ್ಯೆಗೆ(people committed suicide) ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಸಾಕಷ್ಟು ಮಂದಿಯದ್ದು ಮಾನಸಿಕ ಖಿನ್ನತೆ, ಕೌಟುಂಬಿಕ ಕಲಹ, ಸಾಲಬಾಧೆ, ಪ್ರೇಮ ವೈಫಲ್ಯ, ಅಕ್ರಮ ಸಂಬಂಧ ಬಹಿರಂಗ ಕಾರಣಗಳನ್ನು ಹೆಸರಿಸಿ ದೂರುಗಳು ದಾಖಲಾಗಿವೆ.
ಇದನ್ನೂ ಓದಿ: ಯುವತಿ ವಿಚಾರ: ವ್ಯಕ್ತಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಸಾಮೂಹಿಕ ಹಲ್ಲೆ..VIDEO
ಚಾಮರಾಜನಗರ ತಾಲೂಕಿನ ಹೆಚ್. ಮೂಕಳ್ಳಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಇದೇ ವರ್ಷ ಜೂನ್ ತಿಂಗಳ 2 ರಂದು ನೇಣು ಬಿಗಿದುಕೊಂಡು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ಗ್ರಾಮದ ಮಹದೇವಪ್ಪ (47) , ಅವರ ಪತ್ನಿ ಮಂಗಳಮ್ಮ (40) , ಅವರ ಮಕ್ಕಳಾದ ಜ್ಯೋತಿ (14), ಶ್ರುತಿ (12) ಪ್ರಾಣ ಕಳೆದುಕೊಂಡಿದ್ದರು.
ಇವರ ಆತ್ಮಹತ್ಯೆಗೆ ಒಂದು ಕಡೆ ಕೋವಿಡ್ ಮತ್ತೊಂದು ಕಡೆ ಸಾಲಬಾಧೆ ಕಾರಣ ಎಂದು ಹೇಳಲಾಗಿತ್ತು. ಹಾಗಾಗಿ ಮಾನಸಿಕ ಆರೋಗ್ಯದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಾದ ತುರ್ತು ಅಗತ್ಯವನ್ನು ಅಂಕಿ-ಅಂಶ ಸಾರುತ್ತಿದೆ.
ERSS-112ನಿಂದ ಹತ್ತಾರು ಮಂದಿಯ ರಕ್ಷಣೆ:
ರೈಲ್ವೆ ನಿಲ್ದಾಣದಲ್ಲಿ, ಜಲಾಶಯ, ಕೆರೆಗಳಲ್ಲಿ ಆತ್ಮಹತ್ಯೆಗೆ ಯತ್ನಿಸಿದವರನ್ನು ERSS112 ಸಹಾಯವಾಣಿಯ ಪೊಲೀಸರು ಬದುಕಿಸಿರುವ ಹತ್ತಾರು ಘಟನೆಗಳು ನಡೆದಿವೆ. ಕೆಲವೊಮ್ಮೆ, ಕೆರೆಗಳನ್ನು ಆಧರಿಸಿ ಮರ ಹತ್ತಿದವರನ್ನು ಹಾಗೂ ವಿಷ ಕುಡಿದವರನ್ನು ಪೊಲೀಸರು ಬದುಕಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.