ಕೊಳ್ಳೇಗಾಲ: ತರಗತಿಗಳು ನಡೆಯುತ್ತಿಲ್ಲ, ವಿಶೇಷ ತರಗತಿಗಳು ಬಂದ್ ಆಗಿವೆ. ಆನ್ಲೈನ್ ಕ್ಲಾಸ್ ಕೂಡ ಸರಿಯಾಗಿ ನಡೆಯುತ್ತಿಲ್ಲ. ಹೀಗಿರುವಾಗ ಪರೀಕ್ಷೆಯನ್ನು ಹೇಗೆ ತಾನೆ ಎದುರಿಸೋದು ಎಂದು ತಮ್ಮ ಅಳಲನ್ನು ತೋಡಿಕೊಂಡ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ್ದ ಸಚಿವ ಸುರೇಶ್ ಕುಮಾರ್ ಅವರನ್ನು 20ಕ್ಕೂ ಹೆಚ್ಚು ಮಂದಿ ದ್ವಿತೀಯ ಪಿಯುಸಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಡ್ಡಗಟ್ಟಿ ಪರೀಕ್ಷೆ ಮೂಂದೂಡಿ, ಇಲ್ಲವೇ ಕ್ಲಾಸ್ಗಳನ್ನು ನಡೆಸಿ ಎಂದು ಒತ್ತಾಯಿಸಿದ್ದಾರೆ. ಪಾಠ-ಪ್ರವಚನಗಳು ಇನ್ನೂ ಮುಕ್ತಾಯವಾಗಿಲ್ಲ. ಹೀಗಿರುವಾಗ ಮೇ. 24ಕ್ಕೆ ನಿಗದಿಯಾಗಿರುವ ಪರೀಕ್ಷೆಗೆ ಕೂರುವುದು ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಮುದ್ದೇಬಿಹಾಳದಲ್ಲಿ ಅಧಿಕಾರಿಗಳು ಸೇರಿದಂತೆ ಜನರಿಂದ ಕೊರೊನಾ ರೂಲ್ಸ್ ಬ್ರೇಕ್!
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪರೀಕ್ಷೆ ಮೂಂದುಡುವುದಾಗಲಿ, ಕೊರೊನಾ ಸಂದಿಗ್ಧತೆಯಲ್ಲಿ ಕ್ಲಾಸ್ ನಡೆಸುವುದಾಗಲಿ ಸರ್ಕಾರದ ಆದೇಶದಂತೆ ಅವಕಾಶವಿಲ್ಲ ಎಂದು ಉತ್ತರಿಸಿ ಹೊರ ನಡೆದಿದ್ದಾರೆ. ಸರಿಯಾದ ಉತ್ತರ ಸಿಗದ ಕಾರಣ ವಿದ್ಯಾರ್ಥಿಗಳು ಪ್ರಶ್ನೆ ಕೇಳುತ್ತಲೇ ಸಚಿವರ ಹಿಂದೆ ಬಿದ್ದ ಪ್ರಸಂಗ ನಡೆಯಿತು.