ETV Bharat / state

ಚಾಮರಾಜನಗರದಲ್ಲಿ 271 ಹೊಸ ಕೋವಿಡ್ ಕೇಸ್: 964ಕ್ಕೇರಿದ ಸಕ್ರಿಯ ಪ್ರಕರಣ..! - ಚಾಮರಾಜನಗರ ಕೊರೊನಾ ಸುದ್ದಿ

ಕೊರೊನಾ ಎರಡನೇ ಅಲೆಯ ಭೀಕರತೆ ಹೆಚ್ಚಾಗಿದ್ದು, ರಾಜ್ಯಾದಾದ್ಯಂತ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ಚಾಮರಾಜನಗರದಲ್ಲಿ ಇಂದು 271 ಹೊಸ ಕೋವಿಡ್ ಕೇಸ್ ಪತ್ತೆಯಾಗಿದೆ.

Chamarajanagara
Chamarajanagara
author img

By

Published : Apr 22, 2021, 7:27 PM IST

ಚಾಮರಾಜನಗರ: ಕೊರೊನಾ ಎರಡನೇ ಅಲೆಯ ಅಬ್ಬರ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಇಂದು ಬರೋಬ್ಬರಿ 271 ಹೊಸ ಕೋವಿಡ್ ಕೇಸ್ ಪತ್ತೆಯಾಗಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ‌ ಸಂಖ್ಯೆ 964ಕ್ಕೆ ಏರಿಕೆಯಾಗಿದೆ.

ಇಂದು 33 ಮಂದಿ ಗುಣಮುಖರಾಗಿದ್ದು, 42 ಮಂದಿ ಐಸಿಯುನಲ್ಲಿದ್ದಾರೆ. 593 ಮಂದಿ ಹೋಂ ಐಸೋಲೇಷನ್​ನಲ್ಲಿದ್ದಾರೆ. 3,523 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.

ದೃಢಪಟ್ಟಿರುವ ಹೊಸ ಕೋವಿಡ್ ಕೇಸ್​ಗಳಲ್ಲಿ ಚಾಮರಾಜನಗರದ 142, ಗುಂಡ್ಲುಪೇಟೆಯಲ್ಲಿ 48, ಕೊಳ್ಳೇಗಾಲ 31, ಹನೂರಿನ 24, ಯಳಂದೂರಿನ 24 ಹಾಗೂ ಹೊರಜಿಲ್ಲೆಯ ಇಬ್ಬರು ವ್ಯಕ್ತಿಗಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,639 ಮಂದಿಗೆ ಲಸಿಕೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.