ETV Bharat / state

ಮಳೆ ಲೆಕ್ಕಿಸದೇ ಮಾದಪ್ಪನ ಬೆಟ್ಟಕ್ಕೆ ಭಕ್ತರ ದಂಡು.. ಒಂದೇ ದಿನ 10 ಲಕ್ಷಕ್ಕೂ ಹೆಚ್ಚು ಆದಾಯ

author img

By

Published : Oct 23, 2021, 12:57 PM IST

ಎಲ್ಲಾ ಸೇವೆಗಳಿಗೆ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ಶುಕ್ರವಾರ ಒಂದೇ ದಿನ ವಿವಿಧ ಸೇವೆಗಳಿಂದ 10 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ.

10-lakh-donation-collected-in-a-day-at-male-mahadeshwara-swamy-temple
ಮಳೆ ಲೆಕ್ಕಿಸದೇ ಮಾದಪ್ಪನ ಬೆಟ್ಟಕ್ಕೆ ಭಕ್ತರ ದಂಡು... ಒಂದೇ ದಿನ 10 ಲಕ್ಷಕ್ಕೂ ಹೆಚ್ಚು ಆದಾಯ

ಚಾಮರಾಜನಗರ: ಎಲ್ಲಾ ಸೇವೆಗಳಿಗೆ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬರುತ್ತಿದ್ದು, ನಿನ್ನೆ (ಶುಕ್ರವಾರ) ಒಂದೇ ದಿನ ವಿವಿಧ ಸೇವೆಗಳಿಂದ ಲಕ್ಷಾಂತರ ರೂ.‌ ಆದಾಯ ಬಂದಿದೆ.‌

ಈ ಕುರಿತು ಪ್ರಾಧಿಕಾರದ ಕಾರ್ಯದರ್ಶಿ ಮಾಹಿತಿ‌ ನೀಡಿದ್ದು, ಮುಡಿ ಸೇವೆಯಿಂದ 61,400 ರೂ.‌ಬಂದಿದ್ದು, 6.200 ಕೆಜಿ ಉದ್ದಕೂದಲು ಸಂಗ್ರಹವಾಗಿದೆ. ಚಿನ್ನದ ರಥ, ಬಸವ, ರುದ್ರಾಕ್ಷಿ ವಾಹನ, ಹುಲಿ ವಾಹನ ಸೇವೆ ಮೂಲಕ ಬರೋಬ್ಬರಿ 8,06,085 ರೂ.‌ ವರಮಾನ ಬಂದಿದೆ. ಲಾಡು ಪ್ರಸಾದದಿಂದ 1.44 ಲಕ್ಷ ರೂ. ಸಂಗ್ರವಾಗಿರುವುದು ಭಕ್ತಸಾಗರಕ್ಕೆ ಸಾಕ್ಷಿಯಾಗಿದೆ.

10 lakh donation collected in a day at Male Mahadeshwara Swamy Temple
ದೇಗುಲಕ್ಕೆ ಆಗಮಿಸಿದ ಭಕ್ತರ ದಂಡು

ಶುಕ್ರವಾರ ಒಂದೇ ದಿನ ವಿವಿಧ ಸೇವೆಗಳಿಂದ 10 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ. ಅಲ್ಲದೆ, ಇಂದು ಈ ಆದಾಯ ದುಪ್ಪಟ್ಟಾಗುವ ಸಾಧ್ಯತೆ ಇದೆ. ನಿರಂತರ ಮಳೆಯಾಗುತ್ತಿದ್ದರೂ ಲೆಕ್ಕಿಸದ ಮಾದಪ್ಪನ ಭಕ್ತರು ಭಕ್ತಿ ಪರಾಕಾಷ್ಠೆ ಮೆರೆಯುತ್ತಿದ್ದಾರೆ.

ಇದನ್ನೂ ಓದಿ: ಮಲಗಿರುವ ಕೃಷ್ಣನ ಎಚ್ಚರಿಸಲು ಜಾಗರಪೂಜೆ.. ಶ್ರೀಕೃಷ್ಣ ಮಠದಲ್ಲಿ ವಿಶೇಷ ಆರಾಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.