ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣವು ಕಳೆದ ಜೂನ್ 2ಕ್ಕೆ ತನ್ನ ಸುದೀರ್ಘ 50 ವರ್ಷಗಳ ಸಂಭ್ರಮದ ವಸಂತವನ್ನು ಪೂರೈಸಿದೆ.
ಸುವರ್ಣ ಮಹೋತ್ಸವದಲ್ಲಿರುವ ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿಯು ಸಾರ್ವಜನಿಕರಿಂದ ನಿಲ್ದಾಣದ ಹುಟ್ಟು, ವಿಕಸನ ಮತ್ತು ಮೈಲುಗಲ್ಲುಗಳ ಬಗ್ಗೆ ಬರಹಗಳನ್ನು ಆಹ್ವಾನಿಸಿತ್ತು. ಇದಕ್ಕೆ ಸ್ಪಂದಿಸಿ ಸಾರ್ವಜನಿಕರಿಂದ ಸುಮಾರು 100ಕ್ಕೂ ಹೆಚ್ಚು ಬರಹಗಳು ಟ್ವಿಟರ್, ಫೇಸ್ಬುಕ್, ಇಮೇಲ್ ಹಾಗೂ ಅಂಚೆ ಮೂಲಕ ಬಂದಿದ್ದವು. ಈ ಸ್ಪರ್ಧೆಯಲ್ಲಿ ಬೆಂಗಳೂರಿನ ಚಿನ್ನಪ್ಪ, ಆನಂದರಾಮ ರಾವ್ ವಿಜೇತರಾಗಿದ್ದಾರೆ.
ಇನ್ನು ನಿಗಮವು ಸ್ಪರ್ಧಾ ವಿಜೇತರಿಗಾಗಿ ಬಂಪರ್ ಬಹುಮಾನ ನೀಡುತ್ತಿದ್ದು, ಅಂಬಾರಿ ಡ್ರೀಮ್ ಕ್ಲಾಸ್ ಬಸ್ನಲ್ಲಿ ಸವಾರಿ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ವಿಜೇತರು ತಾವು ಆಯ್ಕೆಯ ಒಂದು ಮಾರ್ಗದಲ್ಲಿ ಹೋಗಿ ಬರಲು ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಅಂಬಾರಿ ಡ್ರೀಮ್ ಕ್ಲಾಸ್ ಬಸ್ ಮೂಲಕ ಎರ್ನಾಕುಲಂ, ಪುಣೆ, ಸಿಕಂದರಾಬಾದ್, ವಿಜಯವಾಡ, ಮೈಸೂರು ಮತ್ತು ಮುಂಬೈಗೆ ಹೋಗಿಬರಬಹುದು.
ಒಟ್ಟಾರೆ, ಬೆಂಗಳೂರು ನಗರದ ಹೆಗ್ಗುರುತಿಗೆ 50 ವರ್ಷಗಳು ತುಂಬಿದ್ದು, ಇದೇ ನೆಪದಲ್ಲಿ ಸ್ಪರ್ಧಾ ವಿಜೇತರಿಗೆ ಟೂರ್ ಹೋಗುವ ಅವಕಾಶ ಒಲಿದಿದೆ.