ಬೆಂಗಳೂರು: ಮೆಟ್ರೋ ನಿಲ್ದಾಣವನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಕೊನೆಗೂ ಬಂಧಿಸುವಲ್ಲಿ ಮಾಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರವೀಣ್ ಕುಮಾರ್, ಫೈಜ್ ಷರೀಫ್, ಮಹೇಶ್ ಅಲಿಯಾಸ್ ಮಚ್ಚಿ, ದಿನೇಶ್ ಬಂಧಿತ ಆರೋಪಿಗಳು. ಇವರು ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡುತ್ತಿದ್ದ ಬೈಕ್ಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು.

ಇನ್ನು ತನಿಖೆಯಲ್ಲಿ ಆರೋಪಿಗಳು ಬೆಂಗಳೂರಿನ ಮಾಗಡಿ ರೋಡ್, ವಿಜಯನಗರ ಸೇರಿಂದಂತೆ ಹಲವು ಮೆಟ್ರೋ ಸ್ಟೇಷನ್ನಲ್ಲಿ ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಅದರಲ್ಲೂ ನಕಲಿ ಕೀ ಬಳಸಿ ಪ್ರಯಾಣಿಕರ ಸೋಗಿನಲ್ಲಿ ಹೋಗಿ ಕಳ್ಳತನ ಮಾಡುತ್ತಿದ್ರು. ಸದ್ಯ ಆರೋಪಿಗಳನ್ನ ಬಂಧಿಸಿರುವ ಮಾಗಡಿ ರಸ್ತೆ ಪೊಲೀಸರು, ಆರೋಪಿಗಳಿಂದ 55 ಬೈಕ್ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.