ಬೆಂಗಳೂರು: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಸಖತ್ ಶಾಕ್ ನೀಡಲು ಪರೀಕ್ಷಾ ಮಂಡಳಿ ಚಿಂತನೆ ನಡೆಸಿದ್ದು, ಮುಂದಿನ ವರ್ಷದಿಂದ ಎಸ್ಎಸ್ಎಲ್ಸಿ ಪರೀಕ್ಷಾ ವಿಧಾನ ಬದಲಾಗಲಿದೆ ಎಂದು ತಿಳಿದುಬಂದಿದೆ.
ಹೌದು, ಪರೀಕ್ಷೆ ಪ್ರಶ್ನೆ ಪತ್ರಿಕೆ ಸ್ವರೂಪವನ್ನು ಬದಲಿಸಲು ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ ಚಿಂತಿಸಿದ್ದು, ಪ್ರಶ್ನೆ ಪತ್ರಿಕೆಯಲ್ಲಿನ 40 ಪ್ರಶ್ನೆಗಳನ್ನು 38ಕ್ಕೆ ಇಳಿಸಲಾಗಿದೆ. ಎರಡು ಅಂಕದ ಪ್ರಶ್ನೆಗಳು 16 ರಿಂದ 8ಕ್ಕೆ ಇಳಿಕೆ ಆಗಲಿದ್ದು, 3 ಅಂಕದ ಪ್ರಶ್ನೆಗಳು 6 ರಿಂದ 9ಕ್ಕೆ ಏರಿಕೆ ಆಗಲಿವೆ. ಅಲ್ಲದೇ ಹೊಸದಾಗಿ 5 ಅಂಕದ ಪ್ರಶ್ನೆ ಸೇರ್ಪಡೆ ಆಗಲಿದೆ. ಒಂದು ಅಂಕದ ಪ್ರಶ್ನೆಗಳಲ್ಲಿ ಯಾವುದೇ ಬದಲಾವಣೆ ಮಾಡಲ್ಲ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಶಿಕ್ಷಣ ವೃದ್ಧಿಸುವ , ಬರವಣಿಗೆ ಕೌಶಲ್ಯ ಹೆಚ್ಚಿಸುವಂತೆ ಮಾಡಲು, ಕಂಠಪಾಠ ಪದ್ಧತಿ ತಪ್ಪಿಸಲು ಈ ರೀತಿಯ ಬದಲಾವಣೆಗೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಚಿಂತಿಸಿದೆ. ಈ ಹಿಂದೆ ಪರೀಕ್ಷೆಯಲ್ಲಿ ಕಡ್ಡಾಯ ಪ್ರಶ್ನೆಗಳನ್ನು ಬ್ಲೂ ಪ್ರಿಂಟ್ನಲ್ಲಿರುವಂತೆ ಬೋಧಿಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. ಇದರಿಂದ ಪಠ್ಯದ ಮಧ್ಯದಲ್ಲಿರುವ ಸಂಪೂರ್ಣ ವಿಷಯ ಓದಲು ವಿದ್ಯಾರ್ಥಿಗಳು ಹಿಂಜರಿಯುತ್ತಿದ್ದರು. ಹಾಗಾಗಿ ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಬದಲಿಸಲು ಮಂಡಳಿ ಈ ತೀರ್ಮಾನ ಮಾಡಿದ್ದು, ನೂತನ ಕಾರ್ಯಕ್ಕೆ ಕೈ ಹಾಕಿದೆ ಎನ್ನಲಾಗಿದೆ.