ಬೆಂಗಳೂರು: ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ,ಆಗುವ ಭರವಸೆಗಳನ್ನೇ ನೀಡಿದ್ದು ಅವುಗಳನ್ನು ಈಡೇರಿಸಲು ಬದ್ದ ಎಂದು ಪ್ರಕಟಿಸಿದ್ದಾರೆ.
ಪ್ರೆಸ್ ಕ್ಲಬ್ನಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಪತ್ರಕರ್ತೆ, ಸಾಹಿತಿ ಡಾ. ವಿಜಯಮ್ಮ,ಆಮ್ ಆದ್ಮಿಯ ನಾಯಕಿ ಶಾಂತಲಾ ದಾಮ್ಲೆ ಜೊತೆಗೂಡಿ ಜನರ ಪ್ರಣಾಳಿಕೆ ಹೆಸರಿನ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಪ್ರಕಾಶ್ ರಾಜ್, ಕಳೆದ ಮೂರು ತಿಂಗಳಿನಿಂದ ಕ್ಷೇತ್ರ ಪ್ರವಾಸ ಮಾಡಿ ಸಮಸ್ಯೆಗಳನ್ನು ಅರಿತುಕೊಂಡಿದ್ದೇನೆ. ಈ ಕ್ಷಣದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು,ಅಸಂಘಟಿತ ಕಾರ್ಮಿಕರ ಸಮಸ್ಯೆಗಳೇನು?,ಐಟಿ ಕಂಪನಿ,ಶಿವಾಜಿನಗರ, ಸ್ಲಂ,ಮಕ್ಕಳ ಸಮಸ್ಯೆಗಳೇನು ಎಂದು ಅರಿತಿದ್ದೇನೆ. ಅವುಗಳ ಆಧಾರದಲ್ಲಿ ಪ್ರಣಾಳಿಕೆ ಸಿದ್ದಪಡಿಸಿದ್ದೇನೆ ಎಂದರು.
ಲೋಕಸಭಾ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಪ್ರಣಾಳಿಕೆಯನ್ನು ಯಾವ ಪಕ್ಷವೂ ಬಿಡುಗಡೆ ಮಾಡಿಲ್ಲ,ಸಮಾಜದ ಬಗ್ಗೆ ಕಾಳಜಿ ಇರುವವರು,ಸ್ಥಳೀಯರು ಸೇರಿ ಪ್ರಣಾಳಿಕೆ ಸಿದ್ದಪಡಿಸಿದ್ದೇವೆ, ನಮ್ಮದು ಮಾದರಿ ಕ್ಷೇತ್ರ ಆಗಬೇಕು ಎನ್ನುವುದು ನನ್ನ ಕನಸು, ಅದಕ್ಕಾಗಿ ಪ್ರಜೆಗಳೂ ಕೈ ಜೋಡಿಸಬೇಕು, ಅವರ ಹೊಣೆಗಾರಿಕೆಯೂ ಇದೆ, ಅವರ ಶಕ್ತಿಯನ್ನು ನಾವು ಬಳಸಿಕೊಳ್ಳಬೇಕಿದೆ, ಸ್ವಚ್ಛ ನಗರ,ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆ,ಆರೋಗ್ಯ,ವಸತಿ,ಮೂಲಸೌಕರ್ಯ, ಕುಡಿಯುವ ನೀರು,ಸ್ಲಂಗಳ ಸಮಸ್ಯೆ ಪರಿಹಾರಕ್ಕೆ ನಮ್ಮ ಮೊದಲ ಆಧ್ಯತೆ ಇರಲಿದೆ ನಾವು ಮಾಡಬಹುದಾದ ಭರವಸೆಯನ್ನು ಮಾತ್ರ ಪ್ರಣಾಳಿಕೆಯಲ್ಲಿ ನೀಡಿದ್ದೇವೆ ಅವುಗಳನ್ನು ಈಡೇರಿಸಲು ಬದ್ದನಿದ್ದೇನೆ ಎಂದು ಆಶ್ವಾಸನೆ ನೀಡಿದರು.
ಪ್ರಣಾಳಿಕೆ ಹೈಲೈಟ್ಸ್.....
- ಟ್ರಾಫಿಕ್ ಕಿರಿಕಿರಿ ಮುಕ್ತ ಬೆಂಗಳೂರು
- ಶಿಕ್ಷಣ ಮತ್ತು ಆರೋಗ್ಯ
- ವಸತಿ ವ್ಯವಸ್ಥೆ
- ಉದ್ಯೋಗದ ಹಕ್ಕು
- ಸೌಹಾರ್ದ ಸಹಬಾಳ್ವೆ ಆಶಯಗಳಿಗೆ ಕಟಿಬದ್ದ
- ಉದ್ಯಾನನಗರಿಯನ್ನಾಗಿಸಲು ಮುಂದಡಿ
- ಸಾಮಾಜಿಕ ನ್ಯಾಯದ ಪಾಲನೆ