ETV Bharat / state

ಐಎಂಎ ಸಂಸ್ಥೆಯ ಏಳು ಮಂದಿ ನಿರ್ದೇಶಕರ ಬಂಧನ: ಕಾರು ಜಪ್ತಿ - undefined

ಐಎಂಎ ಸಂಸ್ಥೆಯ ವಂಚನೆ ಪ್ರಕರಣ ಸಂಬಂಧ ಕಂಪನಿಯ 7 ಮಂದಿ ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದು 2 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಅವರನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ.

ಐಎಂಎ ಸಂಸ್ಥೆಯ ಏಳು ಮಂದಿ ನಿರ್ದೇಶಕರ ಬಂಧನ
author img

By

Published : Jun 12, 2019, 8:37 PM IST

Updated : Jun 12, 2019, 8:45 PM IST

ಬೆಂಗಳೂರು: ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದ ಬಳಿಕ ಪರಾರಿಯಾಗಿದ್ದ ಸಂಸ್ಥೆಯ ಏಳು ಮಂದಿ ನಿರ್ದೇಶಕರನ್ನು ನಗರ ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಐಎಂಎ ಸಂಸ್ಥೆಯ ಏಳು ಮಂದಿ ನಿರ್ದೇಶಕರ ಬಂಧನ

ಐಎಂಎ ಸಂಸ್ಥೆಯ ನಿರ್ದೇಶಕರಾಗಿರುವ ನಿಜಾಮುದ್ದೀನ್, ನಾಸೀರ್ ಹುಸೇನ್, ನವೀದ್ ಅಹಮದ್, ಆರ್ಷದ್ ಖಾನ್ , ವಾಸೀಂ, ದಾದಾಫೀರ್ ಹಾಗೂ ಅನ್ವರ್ ಪಾಷಾ ಬಂಧಿತರು.

ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಡಿಸಿಪಿ ರಾಹುಲ್ ಕುಮಾರ್ ಮಾತನಾಡಿ, ಐಎಂಎ ಪ್ರಕರಣ ಸಂಬಂಧ ಕಂಪನಿಯ 7 ನಿರ್ದೇಶಕರನ್ನು ಅರೆಸ್ಟ್ ಮಾಡಿದ್ದೇವೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ಜೊತೆಗೆ ಐಎಂಎ ಮಾಲೀಕರಿಗೆ ಸೇರಿದ 2 ಕಾರುಗಳನ್ನು ಜಪ್ತಿ ಮಾಡಿದ್ದೇವೆ ಎಂದರು.

ಹಗರಣದಲ್ಲಿ ಬಂಧಿತ ನಿರ್ದೇಶಕರ ಪಾತ್ರವೇನು? ಹೂಡಿಕೆದಾರರಿಗೆ ವಂಚಿಸಲು ಇವರ ಕೈವಾಡಗಳೇನು? ಸೇರಿದಂತೆ ಇನ್ನಿತರ ಮಾಹಿತಿಗಳ ಬಗ್ಗೆ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ಸದ್ಯಕ್ಕೆ ನ್ಯಾಯಾಲಯ ಕಲಾಪ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಕೋರಮಂಗಲದ ಎನ್​ಜಿವಿ ಬಡಾವಣೆಯಲ್ಲಿರುವ 4ನೇ ಎಸಿಎಂಎಂ ನ್ಯಾಯಾಧೀಶರ ಮನೆಗೆ ಆರೋಪಿಗಳನ್ನು ಹಾಜರುಪಡಿಸಿ ಬಳಿಕ ಪೊಲೀಸ್ ಕಸ್ಟಡಿ ಪಡೆದುಕೊಳ್ಳುವ ಸಾಧ್ಯತೆಯಿದೆ.

Intro:nullBody:ಐಎಂಎ ಸಂಸ್ಥೆಯಿಂದ ವಂಚನೆ ಪ್ರಕರಣ: ಸಂಸ್ಥೆಯ ಏಳು ಮಂದಿ ನಿರ್ದೇಶಕರ ಬಂಧನ

ಬೆಂಗಳೂರು: ಐಎಂಎ ಸಂಸ್ಥೆಯಿಂದ ಕೋಟ್ಯಂತರ ರೂ.ವಂಚನೆ ಪ್ರಕರಣ ಸಂಬಂಧ ವಂಚನೆಯಲ್ಲಿ ಭಾಗಿಯಾಗಿರುವ ಆರೋಪದಡಿ ಪರಾರಿಯಾಗಿದ್ದ ಸಂಸ್ಥೆಯ ಏಳು ಮಂದಿ ನಿರ್ದೇಶಕರನ್ನು ನಗರ ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಐಎಂಎ ಸಂಸ್ಥೆಯ ನಿರ್ದೇಶಕರಾಗಿರುವ ನಿಜಾಮುದ್ದೀನ್, ನಾಸೀರ್ ಹುಸೇನ್, ನವೀದ್ ಅಹಮದ್, ಆರ್ಷದ್ ಖಾನ್ , ವಾಸೀಂ, ದಾದಾಫೀರ್ ಹಾಗೂ ಅನ್ವರ್ ಪಾಷಾ ಎಂಬುವರನ್ನು ಬಂಧಿಸಿದ್ದಾರೆ.
ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿತ ನಿರ್ದೇಶಕರ ಪಾತ್ರವೇನು ? ಹಗರದಲ್ಲಿ ಹೂಡಿಕೆದಾರರಿಗೆ ವಂಚಿಸಲು ಇವರ ಕೈವಾಡಗಳೇನು ಸೇರಿದಂತೆ ಇನ್ನಿತರ ಮಾಹಿತಿಗಳ ಬಗ್ಗೆ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ನ್ಯಾಯಾಲಯ ಕಲಾಪ ಅವಧಿ ಮುಕ್ತಾಯಗೊಂಡ ಆರೋಪಿಗಳನ್ನು ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆ ಕರೆದೊಯ್ದು ಆರೋಪಿಗಳನ್ನು ಪೊಲೀಸ್ ಕಸ್ಟಡಿ ಪಡೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.Conclusion:null
Last Updated : Jun 12, 2019, 8:45 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.