ETV Bharat / state

ಗೋವಾ ಸಿಎಂ ಪರಿಕ್ಕರ್ ನಿಧನ: ರಾಜ್ಯ ಬಿಜೆಪಿ ನಾಯಕರಿಂದ ಸಂತಾಪ! - ಟ್ವಿಟ್ಟರ್

ಪರಿಕ್ಕರ್ ಅವರ ನಿಧನದ ವಾರ್ತೆ ಕೇಳಿ ತುಂಬಾ ದುಃಖವಾಗುತ್ತಿದೆ. ಅವರ ಅಗಲಿಕೆಯಿಂದ ಭಾರತವು ಪ್ರಾಮಾಣಿಕ, ವಿದ್ಯಾವಂತ ಮತ್ತು ಸುಸಂಸ್ಕೃತ ರಾಜಕಾರಣಿಯನ್ನು ಕಳೆದುಕೊಂಡಿದೆ ಎಂದು ರಾಜ್ಯ ಬಿಜೆಪಿ ನಾಯಕರು ಸಂತಾಪ‌ ಸೂಚಿಸಿದೆ.

ಸಂಗ್ರಹ ಚಿತ್ರ: ಬಿ.ಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ
author img

By

Published : Mar 17, 2019, 10:40 PM IST

ಬೆಂಗಳೂರು: ಗೋವಾ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಮನೋಹರ್ ಪರಿಕ್ಕರ್ ನಿಧನಕ್ಕೆ ರಾಜ್ಯ ಬಿಜೆಪಿ ಸಂತಾಪ‌ ಸೂಚಿಸಿದೆ. ಹಿರಿಯ ನಾಯಕನ ಅಗಲಿಕೆ ದೇಶದ ರಾಜಕಾರಣಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ನಾಯಕರು ಟ್ವಿಟ್ಟರ್ ಮೂಲಕ ಸಂತಾಪ‌ ಸೂಚಿಸಿದ್ದಾರೆ.

ಪರಿಕ್ಕರ್ ಅವರ ನಿಧನದ ವಾರ್ತೆ ಕೇಳಿ ತುಂಬಾ ದುಃಖವಾಗುತ್ತಿದೆ. ಅವರ ಅಗಲಿಕೆಯಿಂದ ಭಾರತವು ಪ್ರಾಮಾಣಿಕ, ವಿದ್ಯಾವಂತ ಮತ್ತು ಸುಸಂಸ್ಕೃತ ರಾಜಕಾರಣಿಯನ್ನು ಕಳೆದುಕೊಂಡಿದೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಕುಟುಂಬ, ಸ್ನೇಹಿತರು ಮತ್ತು ಅನುಯಾಯಿಗಳೊಂದಿಗೆ ಇರಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅಗಲಿದರು ಎನ್ನುವ ಸುದ್ದಿ ಕೇಳಿ ತುಂಬಾ ದುಃಖವಾಗುತ್ತಿದೆ, ರಫೆಲ್ ಡೀಲ್ ಅಂಗೀಕಾರವನ್ನು ಖಾತರಿಪಡಿಸಿದ್ದ ಪರಿಕ್ಕರ್, ಭಾರತೀಯ ಸಶಸ್ತ್ರ ಪಡೆಗಳನ್ನು ಬಲಪಡಿಸಲು ಸಂಪೂರ್ಣ ಸಮಯ ಕೆಲಸ ಮಾಡಿದ್ದರು. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಕುಟುಂಬದ, ಪ್ರೀತಿಪಾತ್ರರ ಜೊತೆ ಇದೆ, ಓಂ ಶಾತಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

ಇನ್ನು ಮನೋಹರ್ ಪಣಿಕ್ಕರ್ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ತೀವ್ರ ದುಃಖವಾಗುತ್ತಿದೆ, ದೇಶದ ರಾಜಕೀಯಕ್ಕೆ ಅವರು ನೀಡಿರುವ ಕೊಡುಗೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಸಂತಾಪ ಸೂಚಿಸಿದ್ದಾರೆ.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.