ETV Bharat / state

ಶಾಸಕಾಂಗ ಪಕ್ಷದ ಸಭೆಗಾಗಿ ಬೆಂಗಳೂರಿಗೆ ಬಿಜೆಪಿ ಶಾಸಕರ ಆಗಮನ - Devanahalli

ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆ ಹಲವಾರು ಶಾಸಕರು ಕೆಐಎಎಲ್​​ನಿಂದ ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ.

ಬೆಂಗಳೂರಿಗೆ ಬಿಜೆಪಿ ಶಾಸಕರ ಆಗಮನ
author img

By

Published : Jul 8, 2019, 6:32 PM IST

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆ ತಮ್ಮ ತಮ್ಮ ಕ್ಷೇತ್ರಗಳಿಂದ ಬಿಜೆಪಿ ಶಾಸಕರು ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ.

ಶಾಸಕ ಅಭಯಪಾಟೀಲ್, ದುರ್ಯೋಧನ ಐಹೊಳೆ, ಅರವಿಂದ್ ಬೆಲ್ಲದ್, ಅನಿಲ್ ಬೆನಕೆ, ಶಶಿಕಲಾ ಜೊಲ್ಲೆ, ಪಿ. ರಾಜೀವ್, ಮಹಾಂತೇಶ್ ದೊಡ್ಡಗೌಡರು, ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್ , ರೂಪಾಲಿ ನಾಯ್ಕ್ ಸೇರಿದಂತೆ ಹಲವಾರು ಶಾಸಕರು ಕೆಐಎಎಲ್​​ನಿಂದ ನಗರಕ್ಕೆ ಆಗಮಿಸಿದ್ದಾರೆ.

ಬೆಂಗಳೂರಿಗೆ ಬಿಜೆಪಿ ಶಾಸಕರ ಆಗಮನ

ಇದೇ ವೇಳೆ ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ, ರಾಜ್ಯದಲ್ಲಿನ ಸಮ್ಮಿಶ್ರ ಸರಕಾರದ ಆಯುಷ್ಯ ಮುಗಿದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್​​ನಲ್ಲಿನ ತಾರತಮ್ಯಕ್ಕೆ ಸಿಡಿದೆದ್ದು ಶಾಸಕರು ರಾಜೀನಾಮೆ ನೀಡಿದ್ದಾರೆ. ಸರಕಾರ ಅಲ್ಪಮತಕ್ಕೆ ಕುಸಿದಿರುವುದು ಕಾಣುತ್ತಿದೆ. ಜು.12ನೇ ತಾರೀಖು ಮುಖ್ಯಮಂತ್ರಿಗಳು ರಾಜೀನಾಮೆ ನೀಡ್ತಾರೆ ಎಂಬ ಭಾವನೆಯಿದೆ. ರಾಜೀನಾಮೆ ನೀಡಿದ ನಂತರ ಬಿಜೆಪಿ ಸರಕಾರ ರಚಿಸುವ ಬಗ್ಗೆ ಚಿಂತಿಸುತ್ತದೆ. ಹೈಕಮಾಂಡ್ ಸೂಚನೆಯೇ ನಮ್ಮ ಮುಂದಿನ ನಡೆ. ಇಂದು 5 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆಯಿದ್ದು, ಮುಂದಿನ ಹೆಜ್ಜೆ ಬಗ್ಗೆ ಚರ್ಚೆಯಾಗುತ್ತದೆ ಎಂದರು.

ಮೈತ್ರಿ ಸರ್ಕಾರ ಒಳ ಜಗಳಗಳಿಂದ ಬಿದ್ದು ಹೋಗುತ್ತಿದೆ. ಈಗಾಗಲೇ ಹಲವಾರು ಶಾಸಕರು ರಾಜೀನಾಮೆ ನೀಡಿದ್ದಾರೆ. ಸರ್ಕಾರ ಅಭಿವೃದ್ಧಿ ಮಾಡುವಲ್ಲಿ ಎಡವಿರುವುದರಿಂದ ಜನರೇ ಅವರ ವಿರುದ್ದ ಇದ್ದಾರೆ. ಸರ್ಕಾರ ರಚನೆಯ ಕುರಿತು ನಮ್ಮ ಪಕ್ಷದ ಮುಖಂಡರು ಮತ್ತು ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಶಾಸಕಿ ರೂಪಾಲಿ ನಾಯ್ಕ್ ಇದೇ ವೇಳೆ ಹೇಳಿದರು.

Intro:KN_BNG_04_08_BJP_MLA_Ambarish_7203301
Slug: ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆ ಬೆಂಗಳೂರಿಗೆ ಬಿಜೆಪಿ ಶಾಸಕರ ಆಗಮನ

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆ, ಬೆಂಗಳೂರಿನತ್ತ ಆಗಮಿಸುತ್ತಿರುವ ಬಿಜೆಪಿ ಶಾಸಕರು. ತಮ್ಮ ತಮ್ಮ ಕ್ಷೇತ್ರಗಳಿಂದ ಬೆಂಗಳೂರಿನತ್ತ ಪಯಣ ಬೆಳೆಸಿರುವ ಬಿಜೆಪಿ ಶಾಸಕರು. ಕೆಐಎಎಲ್ ನಿಂದ ೧೦ ಕ್ಕೂ ಹೆಚ್ಚು ಮಂದಿ ಬೆಂಗಳೂರಿನತ್ತ ಪಯಣ. ಅಭಯಪಾಟೀಲ್, ದುರ್ಯೋಧನ ಹೈಹೊಳೆ, ಅರವಿಂದ್ ಬೆಲ್ಲದ್, ಅನಿಲ್ ಬೆನಕೆ. ಶಶಿಕಲಾ ಜೊಲ್ಲೆ. ಪಿ ರಾಜೀವ್, ಮಹಾಂತೇಶ್ ದೊಡ್ಡಗೌಡರು. ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್ , ರೂಪಾಲಿ ನಾಯ್ಕ್ ಸೇರಿದಂತೆ ಹಲವಾರು ಶಾಸಕರು ಆಗಮಿಸಿದ್ರು..

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಲಕ್ಷ್ಮಣ್ ಸವದಿ, ರಾಜ್ಯದಲ್ಲಿನ ಸಮ್ಮಿಶ್ರ ಸರಕಾರದ ಆಯುಷ್ಯ ಮುಗಿದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿನ ತಾರತಮ್ಯಕ್ಕೆ ಸಿಡಿದೆದ್ದು ಶಾಸಕರು ರಾಜೀನಾಮೆ ನೀಡಿದ್ದಾರೆ. ಸರಕಾರ ಅಲ್ಪ ಮತಕ್ಕೆ ಕುಸಿದಿರುವುದು ಕಾಣುತ್ತಿದೆ. ಜು.೧೨ ನೇ ತಾರೀಖು ಮುಖ್ಯಮಂತ್ರಿಗಳು ರಾಜೀನಾಮೆ ನಿಡ್ತಾರೆ ಎಂಬ ಭಾವನೆಯಿದೆ. ರಾಜೀನಾಮೆ ನೀಡಿದ ನಂತರ ಬಿಜೆಪಿ ಸರಕಾರ ರಚಿಸುವ ಬಗ್ಗೆ ಚಿಂತಿಸುತ್ತದೆ. ಹೈಕಮಾಂಡ್ ಸೂಚನೆ ಮುಂದಿನ ನಡೆ. ಇಂದು ೫ ಗಂಟೆಗೆ ಬಿಜೆಪಿ ಶಾಸಕಾಂಗ ಸಭೆಯಿದ್ದು ಮುಂದಿನ ಹೆಜ್ಜೆ ಬಗ್ಗೆ ಚರ್ಚೆಯಾಗುತ್ತದೆ ಎಂದರು..

ಮೈತ್ರಿ ಸರ್ಕಾರದ ಒಳ ಜಗಳಗಳಿಂದ ಬಿದ್ದು ಹೋಗುತ್ತಿದೆ. ಈಗಾಗಲೇ ಹಲವಾರು ಶಾಸಕರು ರಾಜೀನಾಮೆ ನೀಡಿದ್ದಾರೆ.. ಸರ್ಕಾರ ಅಭಿವೃದ್ಧಿ ಮಾಡುವಲ್ಲಿ ಎಡವಿರುವುದರಿಂದ ಜನರೇ ಅವರ ವಿರುದ್ದ ಇದ್ದಾರೆ.. ಸರ್ಕಾರ ರಚನೆಯ ಕುರಿತು ನಮ್ಮ ಪಕ್ಷದ ಮುಖಂಡರು ಮತ್ತು ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಶಾಸಕಿ ರೂಪಾಲಿ ನಾಯ್ಕ್ ಹೇಳಿದ್ರು..
Body:NoConclusion:No

For All Latest Updates

TAGGED:

Devanahalli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.