ETV Bharat / state

ಬೀದರ್​ನಲ್ಲಿ ಯುವಕನ ಬರ್ಬರ ಕೊಲೆ: ಚಾಕುವಿನಿಂದ ಇರಿದು ಕೊಂದ ವ್ಯಕ್ತಿ - ಬೀದರ್‌ನಲ್ಲಿ ಯುವಕನ ಹತ್ಯೆ

ಬೀದರ್​ನಲ್ಲಿ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಅಂಗಡಿಗೆ ನುಗ್ಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.

young man murder captured in CCTV at Bidar, Young man murder in Bidar, Bidar crime news, ಬೀದರ್‌ನಲ್ಲಿ ಯುವಕನ ಹತ್ಯೆ ಸಿಸಿಟಿವಿಯಲ್ಲಿ ಸೆರೆ, ಬೀದರ್‌ನಲ್ಲಿ ಯುವಕನ ಹತ್ಯೆ, ಬೀದರ್ ಅಪರಾಧ ಸುದ್ದಿ,
ಚಾಕುವಿನಿಂದ ಇರುದು ಯುವಕನ ಕೊಂದ ವ್ಯಕ್ತಿ
author img

By

Published : May 19, 2022, 1:40 PM IST

ಬೀದರ್​: ಹಾಡಹಗಲೇ ಅಂಗಡಿಗೆ ನುಗ್ಗಿ ಯುವಕನನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸಿಂಗಾರ್​ ಬಾಗ್​ನಲ್ಲಿ ನಡೆದಿದೆ. ಸಿಂಗಾರಬಾಗ್ ನಿವಾಸಿ 20 ವರ್ಷದ ಅಮೀರ್ ಖಾನ್ ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ನೂರ್ ಖಾನ್ ತಾಲಿಬ್ ನಿವಾಸಿ ಜೀಷನ್ ಎಂಬಾತ ಕೊಲೆ ಮಾಡಿದ ಆರೋಪಿ.

ಚಾಕುವಿನಿಂದ ಇರುದು ಯುವಕನ ಕೊಂದ ವ್ಯಕ್ತಿ

ನೂರ್ ಖಾನ್ ತಾಲಿಬ್ ನಿವಾಸಿ ಜೀಷನ್ ಸಹೋದರಿಯನ್ನು ಅಮೀರ್​ ಖಾನ್​ ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದೆ. ಮಂಗಳವಾರ ಬೆಳಗ್ಗೆ ಅಮೀರ್​ ಖಾನ್​ ಕೆಲಸ ಮಾಡುತ್ತಿದ್ದ ಅಂಗಡಿಗೆ ತೆರಳಿ ಮನಸೋಇಚ್ಛೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಮೀರ್​ ಖಾನ್​ ಸಾವನ್ನಪ್ಪಿದ್ದಾನೆ.

ಓದಿ: ಅನ್ಯ ಕೋಮಿನ ಯುವತಿ ಜೊತೆ ಲವ್: ಯುವಕನ ಕೊಂದು ಬಾವಿಗೆ ಎಸೆದ್ರು!

ಯುವಕನ ಕೊಲೆ ಮಾಡುತ್ತಿರುವ ದೃಶ್ಯಗಳು ಅಂಗಡಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ. ಈ ಘಟನೆ ಸಂಬಂಧ ಮೃತ ಅಮೀರ್ ಖಾನ್​ ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಜೀಷನ್​ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.