ETV Bharat / state

ಪತ್ರಕರ್ತರ ಸೋಗಿನಲ್ಲಿರುವವರ ಮೇಲೆ ಕ್ರಮ.. ಜಿಲ್ಲಾಧಿಕಾರಿ ರಾಮಚಂದ್ರನ್ ಎಚ್ಚರಿಕೆ - DC Ramachandran

ಜಿಲ್ಲೆಯಲ್ಲಿ ಅನಧಿಕೃತ ಸುದ್ದಿವಾಹಿನಿಗಳು, ನಕಲಿ ಪತ್ರಕರ್ತರು ಸಮಾಜದಲ್ಲಿ ಗೊಂದಲ ಹುಟ್ಟಿಸುತ್ತಿದ್ದಾರೆ. ಈ ಕುರಿತು ಬೀದರ್ ಎಲೆಕ್ಟ್ರಾನಿಕ್ ಮೀಡಿಯಾ ಪದಾಧಿಕಾರಿಗಳು ನೀಡಿದ ದೂರಿನ ಹಿನ್ನೆಲೆ ಜಿಲ್ಲಾಡಳಿತ ಈ ವಿಷಯ ಗಂಭೀರವಾಗಿ ಪರಿಗಣಿಸಿದೆ ಎಂದಿದ್ದಾರೆ..

Ramachandran
Ramachandran
author img

By

Published : Sep 30, 2020, 8:41 PM IST

ಬೀದರ್ : ಅನಧಿಕೃತವಾಗಿ ಸುದ್ದಿವಾಹಿನಿ ಹಾಗೂ ವರದಿಗಾರರ ಹುದ್ದೆಯ ಹೆಸರು ಬಳಸಿ ಗೊಂದಲ ಸೃಷ್ಟಿಸುತ್ತಿರುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಎಚ್ಚರಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲೆಯಲ್ಲಿ ಅನಧಿಕೃತ ಸುದ್ದಿವಾಹಿನಿಗಳು, ನಕಲಿ ಪತ್ರಕರ್ತರು ಸಮಾಜದಲ್ಲಿ ಗೊಂದಲ ಹುಟ್ಟಿಸುತ್ತಿದ್ದಾರೆ. ಈ ಕುರಿತು ಬೀದರ್ ಎಲೆಕ್ಟ್ರಾನಿಕ್ ಮೀಡಿಯಾ ಪದಾಧಿಕಾರಿಗಳು ನೀಡಿದ ದೂರಿನ ಹಿನ್ನೆಲೆ ಜಿಲ್ಲಾಡಳಿತ ಈ ವಿಷಯ ಗಂಭೀರವಾಗಿ ಪರಿಗಣಿಸಿದೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ ಮಾಧ್ಯಮ ಅಥವಾ ಪತ್ರಕರ್ತರ ಹೆಸರಿನ ದುರ್ಬಳಕೆ ಮಾಡಿಕೊಂಡವರ ಕುರಿತು ದೂರು ಬಂದಲ್ಲಿ, ಪರಿಶೀಲನೆ ವೇಳೆ ಅನಧಿಕೃತ ನ್ಯೂಸ್ ಚಾನೆಲ್ ಹಾಗೂ ವರದಿಗಾರರ ಹುದ್ದೆಯ ಹೆಸರು ಬಳಸಿದ್ದು ಕಂಡು ಬಂದ್ರೆ, ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.