ETV Bharat / state

ನಾಲ್ಕು ವರ್ಷಗಳ ಬಳಿಕ ಬೀದರ್‌ನ ಉಗ್ರ ನರಸಿಂಹ ದೇಗುಲಕ್ಕೆ ಭಕ್ತರ ಪ್ರವೇಶ - bidar ugra narasimha swamy temple

ಈ ಮಂದಿರದಲ್ಲಿ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆವರೆಗೆ ದೇವರ ದರ್ಶನ ಪಡೆಯಲು ಅವಕಾಶ ನೀಡಿದ್ದು, ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ugra narasimha swamy temple opened for devotees after four years
ನಾಲ್ಕು ವರ್ಷಗಳ ಬಳಿಕ ಉಗ್ರ ನರಸಿಂಹ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ
author img

By

Published : Feb 17, 2022, 10:24 AM IST

Updated : Feb 17, 2022, 10:40 AM IST

ಬೀದರ್: ಐತಿಹಾಸಿಕ, ಪುರಾಣ ಪ್ರಸಿದ್ಧ ಉಗ್ರ ನರಸಿಂಹ ಸ್ವಾಮಿ ದೇವಸ್ಥಾನದ ಬಾಗಿಲು ನಾಲ್ಕು ವರ್ಷಗಳ ಬಳಿಕ ಭಕ್ತರಿಗೆ ತೆರೆದುಕೊಂಡಿದೆ.

ಮೊದಲು ಆಕ್ಸಿಜನ್ ಹಾಗೂ ನೀರಿನ ಸಮಸ್ಯೆಯಿಂದ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರಲಿಲ್ಲ. ಜೊತೆಗೆ ಕೊರೊನಾ ಕೂಡ ಒಂದು ಕಾರಣವಾಗಿತ್ತು. ಹಾಗಾಗಿ, ನಾಲ್ಕು ವರ್ಷಗಳಿಂದ ಗುಹಾ ದೇವಾಲಯದಲ್ಲಿರುವ ಉಗ್ರ ನರಸಿಂಹ ಸ್ವಾಮಿಯ ದರ್ಶನ ಭಾಗ್ಯವೇ ಭಕ್ತರಿಗಿರಲಿಲ್ಲ.

ಈ ಗುಹಾ ದೇವಾಲಯದಲ್ಲಿ ಸುಮಾರು 200 ಮೀಟರ್ ದೂರ ಎದೆ ಮಟ್ಟದವರೆಗೆ ಹರಿಯುವ ನೀರಿನಲ್ಲಿ ಸಾಗಿ ದೇವರ ದರ್ಶನ ಪಡೆಯಬೇಕಿತ್ತು. ಭಯಂಕರ ಬರಗಾಲ ಇದ್ದರೂ ದೇವಸ್ಥಾನದ ಸನ್ನಿಧಿಯಲ್ಲಿ ನೀರಿನ ಸಮಸ್ಯೆ ಇರಲಿಲ್ಲ. ಆದರೆ, ನಂತರ ಕೊರೊನಾ ಹೊಡೆತಕ್ಕೆ ಎಲ್ಲವೂ ಬಂದ್ ಆಗಿತ್ತು. ಇದೀಗ ಮಂದಿರದಲ್ಲಿ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆವರೆಗೆ ಭಕ್ತರಿಗೆ ದೇವರ ದರ್ಶನ ಪಡೆಯಲು ಅವಕಾಶ ನೀಡಿದ್ದು, ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆಂಧ್ರ ಮೂಲದ 6 ಮಂದಿ ಬೆಳಗಾವಿ ಪೊಲೀಸ್ ವಶ

ಇಲ್ಲಿನ ನರಸಿಂಹ ಸ್ವಾಮಿ ಮಹಾರಾಷ್ಟ್ರ, ತೆಲಂಗಾಣ ಹಾಗು ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದೆ.

Last Updated : Feb 17, 2022, 10:40 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.