ಬೀದರ್ : ಜಿಲ್ಲೆಯ ಓಲ್ಡ್ ಸಿಟಿಯ ಇಡೇನ್ ಕಾಲೋನಿಯ ಇಬ್ಬರಿಗೆ ಕೊರೊನಾ ಸೊಂಕು ಧೃಡವಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಇಡೇನ್ ಕಾಲೋನಿಯ 50 ವರ್ಷದ ವ್ಯಕ್ತಿ ಹಾಗೂ 27 ವರ್ಷದ ಯುವಕನಲ್ಲಿ ಸೊಂಕು ಪತ್ತೆಯಾಗಿದ್ದು, ಈ ಇಬ್ಬರಿಗೂ ರೋಗಿ ನಂಬರ್ 644 ರ ಸಂಪರ್ಕದಿಂದ ಸೊಂಕು ತಗುಲಿದೆ ಎನ್ನಲಾಗಿದೆ.
![two more corona possitive case in bidar](https://etvbharatimages.akamaized.net/etvbharat/prod-images/kn-bdr-01-11-koronapositive-7203280-av-0_11052020123322_1105f_1589180602_30.jpg)
ಇದೀಗ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 28 ಕ್ಕೆ ಏರಿಕೆಯಾಗಿದ್ದು, 14 ಜನರು ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಸದ್ಯ 13 ಜನ ಸೊಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.