ETV Bharat / state

ರಾತ್ರಿ 11ರವರೆಗೆ ವ್ಯಾಪಾರಕ್ಕೆ ಸಮಯಾವಕಾಶ ಕಲ್ಪಿಸುವಂತೆ ವ್ಯಾಪಾರಿಗಳ ಒತ್ತಾಯ - shop owners demands for business time extend

ಹಬ್ಬಗಳ ಹಿನ್ನೆಲೆ ವ್ಯಾಪಾರ ವಹಿವಾಟು ನಡೆಸಲು ಇರುವ ಕಾಲಾವಕಾಶವನ್ನು ಹೆಚ್ಚಿಸುವಂತೆ ಬಸವಕಲ್ಯಾಣದಲ್ಲಿ ವ್ಯಾಪಾರಿಗಳು ಒತ್ತಾಯಿಸಿದ್ದಾರೆ. ಆಯುಧ ಪೂಜೆ, ದಸರಾ ಹಬ್ಬಗಳ ಹಿನ್ನೆಲೆ ಜನ ಹೆಚ್ಚಾಗಿ ಶಾಪಿಂಗ್​​ನಲ್ಲಿ ತೊಡಗುವ ಕಾರಣ ಕನಿಷ್ಠ ರಾತ್ರಿ 11 ಗಂಟೆವರೆಗಾದರೂ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವಂತೆ ಕೋರಿದ್ದಾರೆ.

traders
ವ್ಯಾಪಾರಿಗಳ ಒತ್ತಾಯ
author img

By

Published : Oct 24, 2020, 11:42 AM IST

ಬಸವಕಲ್ಯಾಣ: ಮಹತ್ವದ ಹಾಗೂ ಅತಿ ದೊಡ್ಡ ಹಬ್ಬಗಳ ಸಮಯದಲ್ಲಿ ಅಂಗಡಿಗಳಿಗೆ ವ್ಯಾಪಾರ ವಹಿವಾಟು ನಡೆಸಲು ಹೆಚ್ಚಿನ ಸಮಯಾವಕಾಶ ನೀಡಬೇಕು ಎನ್ನುವ ಒತ್ತಾಯ ವ್ಯಾಪಾರಿ ವಲಯದಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ.

ವ್ಯಾಪಾರಿಗಳ ಒತ್ತಾಯ
ನಗರದ ಬಟ್ಟೆ ಅಂಗಡಿಗಳು ಸೇರಿದಂತೆ ಎಲ್ಲಾ ರೀತಿಯ ಅಂಗಡಿಗಳನ್ನು ರಾತ್ರಿ 10 ಗಂಟೆ ಆಗುತಿದ್ದಂತೆ ಬಂದ್ ಮಾಡಲಾಗುತ್ತಿದ್ದು, ಇದು ಸ್ಥಳೀಯ ವ್ಯಾಪಾರಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನಾಡಹಬ್ಬ ದಸರಾ ಹಬ್ಬದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ರಾತ್ರಿ 10 ಗಂಟೆ ಆಗುತ್ತಿದ್ದಂತೆ ಅಂಗಡಿಗಳ ಮುಂದೆ ಹಾಜರಾಗುವ ಪೊಲೀಸ್ ಸಿಬ್ಬಂದಿ ಅಂಗಡಿ ಮಾಲೀಕರು ಹಾಗೂ ಗ್ರಾಹಕರಿಗೆ ಬೆನ್ನತ್ತಿ ಹೊಡೆಯುತ್ತಿದ್ದಾರೆ. ಇದು ವ್ಯಾಪಾರಿಗಳು ಮತ್ತು ಗ್ರಾಹಕರಿಬ್ಬರಲ್ಲಿಯೂ ಅಸಮಾಧಾನಕ್ಕೆ ಕಾರಣವಾಗಿದೆ. ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದ ಲಾಕ್​​ಡೌನ್ ಸಡಿಲಗೊಂಡ ನಂತರ ಪ್ರಥಮ ಬಾರಿಗೆ ಆಚರಿಸಲಾಗುತ್ತಿರುವ ದಸರಾ ಮತ್ತು ದೀಪಾವಳಿ ಹಬ್ಬಗಳ ನಿಮಿತ್ತ ಹೆಚ್ಚಿನ ಗ್ರಾಹಕರಿಗೆ ರಾತ್ರಿ ಸಮಯದಲ್ಲೇ ಸಮಯಾವಕಾಶ ಸಿಗುವ ಕಾರಣ ಬಹುತೇಕರು ರಾತ್ರಿ ವೇಳೆಯಲ್ಲಿಯೇ ಅಂಗಡಿಗಳಿಗೆ ಬರುತ್ತಾರೆ. ಹೀಗಾಗಿ ಕನಿಷ್ಠ ರಾತ್ರಿ 11 ಗಂಟೆವರೆಗಾದರೂ ವ್ಯಾಪಾರ, ವಹಿವಾಟಿಗೆ ಅವಕಾಶ ಮಾಡಿಕೊಡಬೇಕು ಎನ್ನುವುದು ನಗರದ ವ್ಯಾಪಾರಿಗಳ ಒತ್ತಾಯವಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.