ಬಸವಕಲ್ಯಾಣ: ಹುಲಸೂರ ತಾಲೂಕಿನ ಮಿರಕಲ್‌ನಲ್ಲಿ 3 ಜನ ಸೇರಿದಂತೆ ತಾಲೂಕಿನಲ್ಲಿ ಮತ್ತೆ 7 ಜನರಲ್ಲಿ ಕೊರೊನಾ ಸೋಂಕು ದೃಡಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.
ತಾಲೂಕಿನಲ್ಲಿ ಮಂಗಳವಾರದಿಂದ ಗುರುವಾರದವರೆಗೆ ಮೂರು ದಿನದಲ್ಲಿ 34 ಜನರಲ್ಲಿ ಕಾಣಿಸಿಕೊಂಡ ಸೋಂಕು, ಶನಿವಾರ 3, ಭಾನುವಾರ 7 ಜನರಲ್ಲಿ ಪತ್ತೆಯಾಗಿದೆ. ತಾಲೂಕಿನ ಮನ್ನಳ್ಳಿಯಲ್ಲಿ 19 ವರ್ಷದ ಮಹಿಳೆ, ಉಜಳಂಬನಲ್ಲಿ 25 ವರ್ಷದ ವ್ಯಕ್ತಿ, ರಾಜೋಳಾ (ಗೋರಂಪಳ್ಳಿ)ದ 10 ಮತ್ತು 12 ವರ್ಷದ ಬಾಲಕಿಯರು ಹಾಗೂ ಸಮೀಪದ ಹುಲಸೂರ ತಾಲೂಕಿನ ವ್ಯಾಪ್ತಿಯ ಮಿರಕಲ್ ಗ್ರಾಮದ 3 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಸೋಂಕಿತರೆಲ್ಲರನ್ನು ಬೀದರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನಲ್ಲಿ ಕೋಹಿನೂರು ಗ್ರಾಮದಲ್ಲಿ ಇದುವರೆಗೆ ಅತೀ ಹೆಚ್ಚು ಅಂದರೆ 16 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇದುವರೆಗೆ ಸೋಂಕಿತರ ಸಂಖ್ಯೆ 50ಕ್ಕೆ ತಲುಪಿದಂತಾಗಿದೆ. ಇದರಲ್ಲಿ ಕಳೆದ ತಿಂಗಳು ಒಬ್ಬರು ಗಣಮುಖರಾಗಿ ಮನೆಗೆ ಮರಳಿದ್ದಾರೆ.