ಬೀದರ್ : ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿಳ್ತಿದ್ದಂತೆ ಜಿಲ್ಲೆಯಲ್ಲಿ ರಾತ್ರಿ ರಾಜಕಾರಣ ಶುರುವಾಗಿದೆ. ಇಷ್ಟು ದಿನ ಭರ್ಜರಿ ಪ್ರಚಾರ ಮಾಡಿದ್ದ ಪಕ್ಷಗಳ ಅಭ್ಯರ್ಥಿಗಳು ಸದ್ಯ ಮತದಾರನ ಮನವೊಲಿಸಲು 'ಕತ್ತಲ ರಾತ್ರಿ'ಗೆ ಪ್ಲಾನ್ ಶುರು ಮಾಡಿದ್ದಾರಂತೆ.
ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಹಾಗೂ ಬಿಜೆಪಿಯ ಭಗವಂತ ಖೂಬಾ ಅವರ ನಡುವೆ ನೆರ ಹಣಾಹಣಿ ನಡೆದಿದೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿಳ್ತಿದ್ದಂತೆ ಚುನಾವಣಾ ಅಧಿಕಾರಿಗಳ ಕಣ್ಣು ತಪ್ಪಿಸಿ ಮತದಾರನ ಮನವೊಲಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಮಾತು ಜಿಲ್ಲೆಯಲ್ಲಿ ಕೇಳಿಬರುತ್ತಿದೆ.
ಪ್ರತಿ ಚುನಾವಣೆಯಲ್ಲೂ ಬೂತ್ ಮಟ್ಟದಲ್ಲಿ ಮತದಾರರ ಮುಂದೆ ಆಮಿಷವಿಡುವ ಕೆಲಸಕ್ಕೆ ಕೆಲವರು ಮುಂದಾಗ್ತಾರೆ. ಅದಕ್ಕಾಗೆ ಮತದಾನದ ಪೂರ್ವ ದಿನವನ್ನು ಜನ 'ಕತ್ತಲ ರಾತ್ರಿ' ಎನ್ನುತ್ತಾರೆ. ಈ ಬಾರಿಯ ಚುನಾವಣೆಯಲ್ಲೂ ಇಂಥದ್ದೆನಾದ್ರು ಗಿಮಿಕ್ ನಡೆಯುವ ಸಾಧ್ಯತೆ ದಟ್ಟವಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗ್ತಿದೆ.
ಹೇಗಿದೆ ಬೀದರ್ ಗ್ರೌಂಡ್
ಜಿಲ್ಲೆಯಲ್ಲಿ ಒಟ್ಟು 1773912 ಜನ ಮತದಾರಿದ್ದು, 918595 ಪುರುಷ ಮತ್ತು 855214 ಮಹಿಳಾ ಹಾಗೂ 103 ಇತರ ಮತದಾರಿದ್ದಾರೆ. 20219 ಜನ ವಿಶೇಷ ಚೇತನ ಮತದಾರರು ಅದರಲ್ಲಿ 12893 ಪುರುಷರು ಮತ್ತು 7322 ಮಹಿಳಾ ಹಾಗೂ 01 ಇತರೆ ಮತದಾರರಿದ್ದಾರೆ. ಒಟ್ಟು 1999 ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ.