ಬೀದರ್: ಮಹಾರಾಷ್ಟ್ರದಿಂದ ಬಂದವರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಗರ್ಭಿಣಿ, ಮಗು ಸೇರಿದಂತೆ ಒಟ್ಟು 6 ಜನರಲ್ಲಿ ಸೊಂಕು ಪತ್ತೆಯಾಗಿದೆ.
ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದ 23 ವಯಸ್ಸಿನ ಗರ್ಭಿಣಿ, 2 ವರ್ಷದ ಮಗುವಿಗೆ ಸೊಂಕು ತಗುಲಿದೆ. ಮಹಾರಾಷ್ಟ್ರದ ಸೊಲ್ಲಾಪುರದಿಂದ ಕಳೆದ ಮೇ 15 ರಂದು ಇವರು ಹಳ್ಳಿಖೇಡ ಗ್ರಾಮಕ್ಕೆ ಬಂದಿದ್ದರು. ಇವರ ವೈದ್ಯಕೀಯ ತಪಾಸಣೆ ಮಾಡಿದಾಗ ಸೊಂಕು ಇರುವುದು ದೃಢಡವಾಗಿದೆ.
ಇನ್ನುಳಿದಂತೆ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಮೂವರು ಮಹಾರಾಷ್ಟ್ರದಿಂದ ಬಂದಿದ್ದು, ಇವರಲ್ಲಿ ಸೊಂಕು ಪತ್ತೆಯಾದ್ರೆ, ಹಲಸಿ(ಎಲ್) ಗ್ರಾಮದಲ್ಲಿ ತೆಲಂಗಣದಿಂದ ವಾಪಸ್ ಆದ 28 ವಯಸ್ಸಿನ ಈರ್ವ ವ್ಯಕ್ತಿಯಲ್ಲೂ ಕೊವಿಡ್-19 ಇರುವುದು ಧೃಡವಾಗಿದೆ. ಈ ಮೂಲಕ ಬೀದರ್ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 73 ಕ್ಕೆರಿದ್ದು ಈ ಪೈಕಿ 21 ಜನರು ಗುಣಮುಖರಾಗಿದ್ದಾರೆ. ಅಲ್ಲದೆ ಕೊರೊನಾ ಜಿಲ್ಲೆಯ ಇಬ್ಬರನ್ನು ಬಲಿ ಪಡೆದಿದೆ.